ಹೊಸ ದಿಗಂತ ಡಿಜಿಟಲ್ ಡೆಸ್ಕ್
ಪದವೀಧರ ಮತ್ತು ಶಿಕ್ಷಕರಿಂದ ಆಯ್ಕೆಯಾಗುವ ರಾಜ್ಯದ ವಿಧಾನ ಪರಿಷತ್ ಸದಸ್ಯ ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದೆ.
ವಾಯವ್ಯ ಶಿಕ್ಷಕರ ಕ್ಷೇತ್ರದಿಂದ ಅರುಣ ಸಹಾಪುರ, ವಾಯವ್ಯ ಪದವೀಧರರ ಮತಕ್ಷೇತ್ರಕ್ಕೆ ಹನಮಂತಪ್ಪ ರುದ್ರಪ್ಪ ನಿರಾಣಿ, ದಕ್ಷಿಣ ಪದವೀಧರರ ವಿಭಾಗದಿಂದ ಎಂ ವಿ ರವಿಶಂಕರ ಅವರನ್ನು ಅಭ್ಯರ್ಥಿಯಾಗಿಸಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಪ್ರಕಟಣೆ ಹೊರಬಿದ್ದಿದೆ.