ಆದಿವಾಸಿಗಳ ಆಕ್ರೋಶ: ಸಿಎಂ ಭಾಗವಹಿಸಬೇಕಿದ್ದ ವೇದಿಕೆಗೆ ಬೆಂಕಿ, ಬಿಗುವಿನ ವಾತಾವರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಭಾಗವಹಿಸಲಿದ್ದ ಕಾರ್ಯಕ್ರಮದ ವೇದಿಕೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿರುವ ಘಟನೆ ಶುಕ್ರವಾರ ಬೆಳಗ್ಗೆ ಚುರಾಚಂದಪುರ ಜಿಲ್ಲೆಯಲ್ಲಿ ಸಂಭವಿಸಿದೆ. ಪ್ರಮುಖವಾಗಿ ಇಂದು ಜಿಮ್ ಮತ್ತು ಕ್ರೀಡಾ ಸೌಲಭ್ಯಗಳು ಉದ್ಘಾಟನೆಯಾಗಲಿವೆ. ಆದರೆ, ಪ್ರತಿಭಟನಾಕಾರರು ಕಾರ್ಯಕ್ರಮಕ್ಕೆ ಬೆಂಕಿ ಹಚ್ಚಿದ್ದರಿಂದ ಮುಖ್ಯಮಂತ್ರಿಗಳ ಕಾರ್ಯಕ್ರಮ ರದ್ದಾಗಿದೆ. ಪ್ರತಿಭಟನಾಕಾರರು ಆದಿವಾಸಿ ಬುಡಕಟ್ಟು ವೇದಿಕೆಗೆ ಸೇರಿದವರಾಗಿದ್ದು, ಬಿ.ಜೆ.ಪಿ ರಾಜ್ಯ ಸರ್ಕಾರದ ನೇತೃತ್ವದಲ್ಲಿ ಜೌಗು ಪ್ರದೇಶ ಹಾಗೂ ಮೀಸಲು ಮತ್ತು ಸಂರಕ್ಷಿತ ಅರಣ್ಯ ಪ್ರದೇಶಗಳ ಸಮೀಕ್ಷೆಗೆ ಆದಿವಾಸಿ ಬುಡಕಟ್ಟು ಮುಖಂಡರ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ.

ಇದಲ್ಲದೇ ರಾಜ್ಯದಲ್ಲಿ ಬಿಜೆಪಿ ಸರಕಾರ ಚರ್ಚ್‌ಗಳನ್ನು ಧ್ವಂಸ ಮಾಡುತ್ತಿದೆ ಎಂದು ಆದಿವಾಸಿ ಮುಖಂಡರ ವೇದಿಕೆ ಆರೋಪಿಸಿದೆ. ಮಣಿಪುರ ಸರ್ಕಾರವು ಈ ತಿಂಗಳ ಆರಂಭದಲ್ಲಿ ರಾಜ್ಯದಲ್ಲಿ ಮೂರು ಚರ್ಚ್‌ಗಳನ್ನು ಕೆಡವಿತ್ತು. ಇತ್ತೀಚಿನ ಘಟನೆಯ ನಂತರ, ಚುರಾಚಂದ್‌ಪುರ ಪ್ರದೇಶದಲ್ಲಿ ಸೆಕ್ಷನ್ 144 ವಿಧಿಸಲಾಯಿತು. ಎಲ್ಲಾ ಇಂಟರ್ನೆಟ್ ಸೇವೆಗಳನ್ನು ಸಹ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಉದ್ರೇಕಗೊಂಡ ಪ್ರತಿಭಟನಾಕಾರರು ಸ್ಥಳದಲ್ಲಿ ದ್ದ ಕುರ್ಚಿಗಳು ಮತ್ತು ಇತರ ವಸ್ತುಗಳನ್ನು ಒಡೆಯುವುದು ವೀಡಿಯೊಗಳಲ್ಲಿ ದಾಖಲಾಗಿದೆ. ಹೊಸ ನಿರ್ಮಿಸಿದ ಜಿಮ್‌ನಲ್ಲಿದ್ದ ಕ್ರೀಡಾ ಸಾಮಗ್ರಿಗಳೆಲ್ಲ ಸುಟ್ಟು ಕರಕಲಾಗಿವೆ. ಸ್ಥಳೀಯ ಪೊಲೀಸರು ತಕ್ಷಣ ಪ್ರತಿಭಟನಾಕಾರರನ್ನು ಅಲ್ಲಿಂದ ಚದುರಿಸಿದರು. ವೇದಿಕೆ ಈಗಾಗಲೇ ನೂರಾರು ಕುರ್ಚಿಗಳಿಂದ ನಾಶವಾಗಿದೆ. ಪರಿಸ್ಥಿತಿ ಹತೋಟಿ ಮೀರುತ್ತಿದ್ದಂತೆ ಚುರಚಂದಪುರ ಆಡಳಿತ ಜಿಲ್ಲೆಯಲ್ಲಿ ಬಿಗಿ ಭದ್ರತೆ ಕೈಗೊಂಡಿದೆ. ಆದರೆ, ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ಬಿರೇನ್ ಸಿಂಗ್ ಉದ್ಘಾಟಿಸಬೇಕಿದ್ದ ಪಿಟಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಹೊಸದಾಗಿ ಸ್ಥಾಪಿಸಲಾದ ಓಪನ್ ಜಿಮ್‌ಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸರಕಾರ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳನ್ನು ತಡೆಯಲು ಸರಕಾರದ ವಿರುದ್ಧ ಅಸಹಕಾರ ಚಳವಳಿ ನಡೆಸಬೇಕಾಗಿದೆ ಎಂದು ಆದಿವಾಸಿ ವೇದಿಕೆ ಹೇಳಿದೆ. ಇವತ್ತು ಶುಕ್ರವಾರ ಜಿಲ್ಲೆಯಲ್ಲಿ ಬೆಳಗ್ಗೆ 8ರಿಂದ ಎಂಟು ಗಂಟೆಗಳ ಕಾಲ ಮುಷ್ಕರಕ್ಕೆ ಕರೆ ನೀಡಲಾಗಿದೆ. ರಾಜ್ಯದ ಆದಿವಾಸಿಗಳ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆರೋಪಿಸಿ ಕುಕಿ ವಿದ್ಯಾರ್ಥಿಗಳ ಸಂಘಟನೆಯೂ ವೇದಿಕೆಗೆ ಬೆಂಬಲ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!