Sunday, December 10, 2023

Latest Posts

FASHION| ಈಕೆ ಡ್ರೆಸ್‌ ಒಂದು ಅಕ್ವೇರಿಯಂ: ಜೀವಂತ ಮೀನುಗಳೊಂದಿಗೆ ಕ್ಯಾಟ್‌ ವಾಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಫ್ಯಾಷನ್ ಜಗತ್ತು ಎಂಥವರನ್ನೂ ನಿಬ್ಬರಗಾಗಿಸುತ್ತದೆ. ಫ್ಯಾಷನ್ ಶೋಗಳಲ್ಲಿ ಮಾಡೆಲ್‌ಗಳು‌ ಧರಿಸುವ ಬಟ್ಟೆಗಳು ನೋಡುಗರ ಕಣ್ಣು ಕುಕ್ಕುತ್ತವೆ. ಅದರ ಜೊತೆ ರೂಪದರ್ಶಿಯ ರ್ಯಾಂಪ್‌ ವಾಕ್‌ಗೆ ಮನಸೋಲದವರಿಲ್ಲ. ಚಿತ್ರ-ವಿಚಿತ್ರ ವಿನ್ಯಾಸಗಳನ್ನು ಕಂಡರೂ ಇದೀಗ ವೈರಲ್‌ ಆಗಿರುವ ವಿಡಿಯೋ ವಿವಾದಕ್ಕೆ ಕಾರಣವಾಗಿದೆ.

ಪ್ರಾಣಿಗಳ ತುಪ್ಪಳ ಮತ್ತು ಚರ್ಮವನ್ನು ಫ್ಯಾಷನ್ ಮತ್ತು ಮನರಂಜನೆಯಲ್ಲಿ ಬಳಸುವುದರ ಬಗ್ಗೆ ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಫ್ಯಾಷನ್ ಶೋವೊಂದರಲ್ಲಿ ಮಾಡೆಲ್ ಧರಿಸಿದ್ದ ಡ್ರೆಸ್ ವಿವಾದಕ್ಕೀಡಾಗಿದ್ದು, ಪ್ರಾಣಿ ಹಕ್ಕು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ಮೇಕ್ ಓವರ್ ಬೈ ಪ್ರೀತಿ (ohsopretty_makeover ಮತ್ತು preethijerlin) ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಡಿಸೈನರ್ ಮಾಡಿದ ಲೈವ್ ಫಿಶ್ ಡ್ರೆಸ್‌ನ ವೀಡಿಯೊ ವೈರಲ್ ಆಗುತ್ತಿದೆ. ಡ್ರೆಸ್ ಮಧ್ಯೆ ಚಿಕ್ಕ ಗಾಜಿನ ಪಾತ್ರೆಯಿದ್ದು, ಅದರೊಳಗೆ ಜೀವಂತ ಮೀನುಗಳಿವೆ. ಈ ವಸ್ತ್ರ ಧರಿಸಿ ರೂಪದರ್ಶಿ ಕ್ಯಾಟ್‌ ವಾಕ್‌ ಮಾಡಿದ್ದು, ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಿಮ್ಮ ಸೃಜನಶೀಲತೆಯನ್ನು ಗೌರವಿಸುತ್ತೇವೆ ಆದರೆ, ಅವುಗಳು ಜೀವಂತ ಜೀವಿಗಳು ಎಂಬುದನ್ನು ಮರೆಯಬೇಡಿ. ನಿಮ್ಮ ಫ್ಯಾಷನ್‌ ಹುಚ್ಚಿನಿಂದ ಅವುಗಳಿಗೆ ಉಸಿರುಗಟ್ಟಿಸುತ್ತಿದ್ದೀರಿ. ಇಂತಹವುಗಳನ್ನು ಕೂಡಲೇ ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!