ಮೋದಿ-ಅದಾನಿ ಭಾಯಿ ಭಾಯಿ ಘೋಷಣೆ: 16 ಕಾಂಗ್ರೆಸ್ ಶಾಸಕರು ಗುಜರಾತ್ ವಿಧಾನಸಭೆಯಿಂದ ಅಮಾನತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವ ಕುರಿತು ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ಗುಜರಾತ್ ವಿಧಾನಸಭೆ (Gujarat Assembly) ಸ್ಪೀಕರ್ ಸೋಮವಾರ 17 ಕಾಂಗ್ರೆಸ್ ಶಾಸಕರ ಪೈಕಿ 16 ಮಂದಿಯನ್ನು ಬಜೆಟ್ ಅಧಿವೇಶನದ (Budget session) ಉಳಿದ ಭಾಗಕ್ಕೆ ಮಾರ್ಚ್ 29 ರವರೆಗೆ ಸದನದಿಂದ ಅಮಾನತುಗೊಳಿಸಿದ್ದಾರೆ.

ಸ್ಪೀಕರ್ ಶಂಕರ್ ಚೌಧರಿ ಅವರು ಕಾಂಗ್ರೆಸ್ ಶಾಸಕರ ನೇತೃತ್ವದ ಪ್ರತಿಭಟನೆಯನ್ನು ಶಾಂತಗೊಳಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಹಾಗಾಗಿ ಇಮ್ರಾನ್ ಖೇಡಾವಾಲಾ, ಗೆನಿಬೆನ್ ಠಾಕೂರ್ ಮತ್ತು ಅಮೃತ್‌ಜಿ ಠಾಕೋರ್ ಸೇರಿದಂತೆ ಪ್ರತಿಭಟನಾ ನಿರತ ಶಾಸಕರನ್ನು ಹೊರಹಾಕಲು ಮಾರ್ಷಲ್‌ಗಳನ್ನು ಕರೆದರು. ಅನಂತ್ ಪಟೇಲ್ ಹೊರತುಪಡಿಸಿ ಉಳಿದ 16 ಕಾಂಗ್ರೆಸ್ ಶಾಸಕರು ಸೋಮವಾರ ಸದನದಲ್ಲಿ ಹಾಜರಿದ್ದರು.

ಕಾಂಗ್ರೆಸ್‌ನ ಇತರ ಶಾಸಕರು ಸದನದ ಬಾವಿಗಿಳಿದು ಮೋದಿ-ಅದಾನಿ ಭಾಯಿ ಭಾಯಿ ಎಂದು ಘೋಷಣೆಗಳನ್ನು ಕೂಗಿದ್ದಾರೆಯ ಶಾಸಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೌತಮ್ ಅದಾನಿಯನ್ನು ಜತೆಗಿರುವ ಫೋಟೋಗಳನ್ನು ಕೂಡಾ ತೋರಿಸಿದ್ದಾರೆ. ಎಲ್ಲಾ 16 ಶಾಸಕರು ಘೋಷಣೆಗಳನ್ನು ನಿಲ್ಲಿಸಲು ನಿರಾಕರಿಸಿದಾಗ ಚೌಧರಿ ಜನರ ಸಮಯ
ವ್ಯರ್ಥ ಮಾಡುವುದರ ವಿರುದ್ಧ ಪ್ರತಿಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಶಾಸಕರು ಅಲ್ಲಿಯೇ ಉಳಿದಿದ್ದರಿಂದ ಸ್ಪೀಕರ್ ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!