ಸೇಡಿಗೆ ಸೇಡು..! ನಾಗಿಣಿ ಡ್ಯಾನ್ಸ್‌ ಮಾಡಿ ʼಬಾಂಗ್ಲಾ ಹುಲಿʼಗಳ ಮೇಲೆ ಪ್ರತಿಕಾರ ತೀರಿಸಿಕೊಂಡ ಲಂಕಾ ಪ್ಲೆಯರ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್
2018ರ ನಿದಾಹಸ್ ಟ್ರೋಫಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ರೋಚಕ ಪಂದ್ಯದಲ್ಲಿ ಗೆದ್ದಿದ್ದ ಬಾಂಗ್ಲಾದೇಶ ಆಟಗಾರರು ಮೈದಾನಲ್ಲೇ ‘ನಾಗಿನ್ ನೃತ್ಯ’ ಮಾಡುವ ಮೂಲಕ ಭರ್ಜರಿಯಾಗಿ ವಿಜಯೋತ್ಸವವನ್ನು ಆಚರಿಸಿದ್ದರು.
ಮೊದಲೇ ಸೋಲಿನಿಂದ ಕುಗ್ಗಿಹೋಗಿದ್ದ ಸಿಂಹಳೀಯರಿಗೆ ಬಾಂಗ್ಲಾ ಹುಲಿಗಳ ಅತಿರೇಕದ ವಿಚಿತ್ರ ಸೆಲೆಬ್ರೇಶನ್‌ ಮತ್ತಷ್ಟು ಉರಿಸಿತ್ತು. ಆಂದು ಆಗಿದ್ದ ಅಪಮಾನಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶ ಬರೋಬ್ಬರಿ 4 ವರ್ಷಗಳ ಬಳಿಕ ಲಂಕನ್ನರಿಗೆ ಸಿಕ್ಕಿದೆ. ಗೆಲ್ಲಲೇ ಬೇಕಿದ್ದ  ಪಂದ್ಯದಲ್ಲಿ ರೋಚಕವಾಗಿ ಗೆದ್ದು ಬಾಂಗ್ಲಾ ಹುಲಿಗಳನ್ನು ಟೂರ್ನಿಯಿಂದ ಹೊರಹಾಕಿರುವ ಸಿಂಹಳೀಯರು ಸೂಪರ್ 4 ಹಂತಕ್ಕೆ ಲಗ್ಗೆಯಿಟ್ಟಿದ್ದಾರೆ. ಗೆಲುವು ಸಾಧಿಸುತ್ತಿದ್ದಂತೆ ಲಂಕಾ ಆಟಗಾರರು ಡಗೌಟ್​ನಲ್ಲೇ ನಾಗಿಣಿ ನೃತ್ಯ ಮಾಡುವ ಮೂಲಕ ಈ ಹಿಂದೆ ತಮಗಾಗಿದ್ದ ಅಪಮಾನಕ್ಕೆ ಸೇಡು ತೀರಿಸಿಕೊಂಡಿದ್ದಾರೆ.
ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಬಾಂಗ್ಲಾದೇಶ ನಿಗದಿತ 20 ಓವರ್​​​ಗಳಲ್ಲಿ 7 ವಿಕೆಟ್ ​​ನಷ್ಟಕ್ಕೆ 183 ರನ್ ಕಲೆಹಾಕಿತು.
ಗುರಿ ಬೆನಬ್ನತ್ತಿದ್ದ ಶ್ರೀಲಂಕಾ ತಂಡಕ್ಕೆ ಗೆಲಲ್ಲು ಕೊನೆಯ 12 ಎಸೆತಗಳಲ್ಲಿ 25 ರನ್​​ಗಳ ಅವಶ್ಯಕತೆ ಇತ್ತು. ಎಸೆತ ಎಸೆತಕ್ಕೂ ಪಂದ್ಯ ಎರಡೂ ಕಡೆಗೆ ತೂಗುಯ್ಯಾಲೆ ಆಡುತ್ತಿತ್ತು. ಈ ವೇಳೆ ಲಂಕಾ 8 ವಿಕೆಟ್‌ ಕಳೆದುಕೊಂಡಿತ್ತು. ಬಾಂಗ್ಲಾ ದೇಶ ಗೆಲ್ಲುವ ಫೆವರಿಟ್‌ ಸ್ಥಾನದಲ್ಲಿತ್ತು. ಈ ಹಂತದಲ್ಲಿ ಲಂಕಾ ಟೆಲೆಂಡರ್ ಗಳು ಮ್ಯಾಜಿಕ್‌ ಮಾಡಿದರು. ಇಬಾದತ್‌ ಹುಸೇನ್‌ ಎಸೆದ 19 ನೇ ಓವರ್‌ ನಲ್ಲಿ ಬರೋಬ್ಬರಿ 17 ರನ್‌ ಸಿಡಿಸಿ ಪಂದ್ಯದ ಸಮೀಕರಣವನ್ನೇ ಬದಲಿಸಿದರು. ಕೊನೆಯ 6 ಎಸೆತಗಳಲ್ಲಿ ಗೆಲುವಿಗೆ 8 ರನ್‌ ಅಗತ್ಯವಿತ್ತು. ಅದೇರೀತಿ ಬಾಂಗ್ಲಾ ಗೆಲುವಿಗೆ 2 ವಿಕೆಟ್‌ ಗಳ ಅಗತ್ಯವಿತ್ತು. ಚೊಚ್ಚಲ ಪಂದ್ಯವಾಡುತ್ತಿದ್ದ ಬೌಲರ್‌ ಅಸಿತಾ ಫೆರ್ನಾಂಡೋ ಕೊನೆಯ ಓವರ್​​ನಲ್ಲಿ ಯಾರೂ ನಿರೀಕ್ಷಿತ ರೀತಿಯಲ್ಲಿ ಎರಡು ಅಮೋಘ ಬೌಂಡರಿ ಸಿಡಿಸಿ ಲಂಕೆಗೆ ರೋಚಕ ಗೆಲುವು ತಂದುಕೊಟ್ಟರು.
ಈ ಗೆಲವಿನ ಮೂಲಕ ಲಂಕಾ ಸೂಪರ್ 4 ಹಂತಕ್ಕೆ ಲಗ್ಗೆಯಿಟ್ಟರೆ, ಬಾಂಗ್ಲಾ ಆಟಗಾರರು ಕೈಯ್ಯಲ್ಲಿದ್ದ ಗೆಲುವನ್ನು ಕೈಚೆಲ್ಲಿ ನಿರಾಸೆಯ ಮುಖ ಹೊತ್ತು ನಿಂತರು.

ತಂಡ ರೋಚಕವಾಗಿ ಗೆಲ್ಲುತ್ತಿದ್ದಂತೆ ಶ್ರೀಲಂಕಾದ ಕ್ರಿಕೆಟಿಗ ಚಮಿಕಾ ಕರುಣಾರತ್ನೆ ಮತ್ತು ಅಭಿಮಾನಿಗಳು ಲಂಕನ್ನರ ‘ನಾಗಿನ್ ನೃತ್ಯ’ ಸಂಭ್ರಮಾಚರಣೆ ಮಾಡಿ ಸಂಭ್ರಮಿಸಿದರು. ಈ ಮೂಲಕ 4 ವರ್ಷಗಳ ಹಿಂದೆ ನಿದಾಹಾಸ್ ಟ್ರೋಫಿಯಲ್ಲಿ ಬಾಂಗ್ಲಾದೇಶವು ಅಪಹಾಸ್ಯ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡರು.

ಅಫ್ಘಾನಿಸ್ತಾನ, ಭಾರತ ಈಗಾಗಲೇ ಮುಂದಿನ ಸುತ್ತಿಗೆ ಅರ್ಹತೆ ಪಡೆದಿವೆ. ಸೂಪರ್ 4 ಹಂತ ಪ್ರವೇಶಿಸುವ ಮತ್ತೋಮದು ತಂಡ ಯಾವುದು ಎಂಬುದು ಪಾಕ್-‌ ಹಾಂಗ್‌ ಕಾಂಗ್‌ ಪಂದ್ಯದ ಬಳಿಕ ನಿರ್ಧಾರವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!