ಕ್ವಾಡ್‌ ಗೆ ಭಾರತದ ಕಲಾಸಂಪತ್ತನ್ನು ಪರಿಚಯಿಸಿದ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕ್ವಾಡ್‌ ಶೃಂಗಕ್ಕೆಂದು ಜಪಾನ್ ಗೆ ತೆರಳಿರುವ ಮೋದಿ ಕ್ವಾಡ್‌ ನಾಯಕರಿಗೆ ಭಾರತದ ಕರಕುಶಲ  ಕಲೆಗಳನ್ನು ಬಿಂಬಿಸುವ ಕಲಾತ್ಮಕ ಉಡುಗೊರೆಗಳನ್ನು ನೀಡುವ ಮೂಲಕ ಭಾರತದ ಶ್ರೀಮಂತ ಪರಂಪರೆಯನ್ನು ಪರಿಚಯಿಸಿದ್ದಾರೆ.

ಪಟ್ಟಮಾಡೈ ರೇಷ್ಮೆ ಚಾಪೆಗಳು ಮತ್ತು ಗೊಂಡ ಕಲೆಯ ಚಿತ್ರಕಲೆ, ಕೈಕೆತ್ತನೆಯ ರೋಗನ್ ಪೇಂಟಿಂಗ್‌, ಸಾಂಝಿ ಕಲೆಯ ಬಾಕ್ಸ್‌ಗಳನ್ನು ಪ್ರದಾನಿ ಮೋದಿ ಇತರ ಕ್ವಾಡ್‌ ರಾಷ್ಟ್ರಗಳ ನಾಯಕರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಶ್ರೀಕೃಷ್ಣನ ಕಥೆಗಳ ಲಕ್ಷಣಗಳನ್ನು ಕೊರೆಯಚ್ಚುಗಳಲ್ಲಿ ಮೂಡಿಸುವ ಮಥುರಾದ ಕಲಾಪ್ರಕಾರವಾದ ಸಾಂಝಿ ಚಿತ್ರಕಲೆಯ ಕುರಿತಾದ ಉಡುಗೊರೆಯನ್ನು ಅಮೆರಿಕದ ಅಧ್ಯಕ್ಷ ಜೋ ಬಿಡೆನ್‌ ಗೆ ಮೋದಿ ಉಡುಗೊರೆಯಾಗಿ ನೀಡಿದ್ದಾರೆ. ತರಕಾರಿ ಬೀಜಗಳಿಂದ ಅಥವಾ ಎಣ್ಣೆಯಿಂದ ಮಾಡಿರುವ ಬಣ್ಣಗಳಿಂದ ಬಟ್ಟೆಗಳ ಮೇಲೆ ಚಿತ್ತಾರ ಮೂಡಿಸುವ ಗುಜರಾತ್‌ನ ಕಛ್‌ ಭಾಗದ ಕಲೆಯಾಗಿರುವ ರೋಗನ್‌ ಪೇಂಟಿಂಗ್‌ ಗಳನ್ನು ಮೋದಿ ಜಪಾನ್‌ ಪ್ರಧಾನಿಗೆ ನೀಡಿದ್ದಾರೆ.

ಚುಕ್ಕೆಗಳು ಮತ್ತು ರೇಖೆಗಳಿಂದ ನಿರ್ಮಿಸುವ ಮಧ್ಯಪ್ರದೇಶದ ಅತ್ಯಂತ ಸುಂದರ ಕಲಾ ಪ್ರಕಾರವಾದ ಗೊಂಡ ಚಿತ್ರಕಲೆಯ ಉಡುಗೊರೆಯನ್ನು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಮೋದಿಯವರಿಂದ ಸ್ವೀಕರಿಸಿದ್ದಾರೆ. ಅಲ್ಲದೇ ತಮಿಳುನಾಡಿನ ಪಟ್ಟಮಾಡೈ ಪ್ರದೇಶದ ರೇಷ್ಮೆ ಚಾಪೆಗಳನ್ನು ಜಪಾನ್‌ ನ ಮಾಜಿ ಪ್ರಧಾನಿಗಳಿಗೆ ಕೊಡಲಾಗಿದೆ. ಆ ಮೂಲಕ ಭಾರತದ ಶ್ರೀಮಂತ ಕಲಾ ಸಂಪತ್ತನ್ನು ಮೋದಿ ಜಾಗತಿಕವಾಗಿ ಪರಿಚಯಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!