ಕೋವಿಡ್‌ ವಿರುದ್ಧ ಹೋರಾಡುತ್ತಿರುವ ಜಗತ್ತಿನ ಏಕೈಕ ನಾಯಕ ಪ್ರಧಾನಿ ಮೋದಿ: ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್

ಹೊಸದಿಗಂತ ವರದಿ, ಮೈಸೂರು:

ಇಡೀ ವಿಶ್ವವನ್ನು ಕಾಡುತ್ತಿರುವ ಕೊರೋನಾ ಸೋಂಕಿನ ವಿರುದ್ಧ ಸಮರ್ಥವಾಗಿ ಹೋರಾಡುತ್ತಿರುವ ಜಗತ್ತಿನ ಏಕೈಕ ನಾಯಕ ಪ್ರಧಾನಿ ನರೇಂದ್ರ ಮೋದಿ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ತಿಳಿಸಿದ್ದಾರೆ.
ಸೋಮವಾರ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಕೊರೊನಾ ಸೋಂಕಿನ ವಿರುದ್ಧ ಹೋರಾಡುವಲ್ಲಿ ಜಗತ್ತಿನ ಬಲಾಢ್ಯ ರಾಷ್ಟ್ರಗಳು ಕಂಗಾಲಾಗಿವೆ.
ಆದರೆ ಪ್ರಧಾನಿ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ ಭಾರತದಲ್ಲಿ ಕೇವಲ ಒಂದು ವರ್ಷದಲ್ಲಿ ಕೊರೊನಾ ಲಸಿಕೆ ಕಂಡು ಹಿಡಿಯಲಾಯಿತು.
ಈ ಮೊದಲೆಲ್ಲಾ ಯಾವುದೇ ಮಾರಕ ಕಾಯಿಲೆಗೆ ಲಸಿಕೆ ಕಂಡು ಹಿಡಿಯಲು ಹಲವು ದಶಕಗಳೇ ಬೇಕಾಗುತ್ತಿತ್ತು.
ಆದರೆ ಪ್ರಧಾನಿ ನರೇಂದ್ರ ಮೋದಿಯವರ ದಕ್ಷ ಆಡಳಿತದ ಫಲವಾಗಿ ಕೊರೊನಾ ಲಸಿಕೆಯನ್ನು ಕೇವಲ ಒಂದು ವರ್ಷದಲ್ಲಿ ಕಂಡು ಹಿಡಿಯಲಾಯಿತು.
ಪರಿಣಾಮ ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದಾದ್ಯಂತ 157 ‌ಕೋಟಿಗೂ ಹೆಚ್ಚಿನ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಈ ಪೈಕಿ 66 ಕೋಟಿಗೂ ಹೆಚ್ಚಿನ ಜನರು ಎರಡೂ ಡೋಸ್ ಪಡೆದಿದ್ದಾರೆ. 91 ಕೋಟಿಗೂ ಅಧಿಕ ಮಂದಿ ಮೊದಲ ಡೋಸ್ ಪಡೆದಿದ್ದಾರೆ.
ಭಾರತದ ಕೊರೊನಾ ಲಸಿಕಾ ಅಭಿಯಾನದ ಯಶಸ್ಸನ್ನು ಕಂಡು ಇಡೀ ವಿಶ್ವವೇ ಶ್ಲಾಘನೆ ವ್ಯಕ್ತಪಡಿಸಿದೆ.
ಜಗತ್ತಿನ ಮುಂದುವರಿದ ರಾಷ್ಟ್ರಗಳಲ್ಲಿ ಆಗದ ಕೊರೊನಾ ಲಸಿಕಾ ಅಭಿಯಾವನ್ನು ಪ್ರಧಾನಿ ಮೋದಿ ಮಾಡಿ ತೋರಿಸಿದ್ದಾರೆ.
ಭಾರತದ ಲಸಿಕಾ ಅಭಿಯಾನವನ್ನು ವಿಶ್ವ ಆರೋಗ್ಯ ಸಂಸ್ಥೆಯೂ ಕೊಂಡಾಡಿದೆ.
ಇದಕ್ಕೆಲ್ಲ ಕಾರಣೀಭೂತರಾಗಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!