ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಮೇಲಿನ ರಷ್ಯಾದ ದಾಳಿ ವಿರೋಧಿಸಿದ ಯೂಟ್ಯೂಬ್ ರಷ್ಯಾದ ಸರ್ಕಾರಿ ಮಾಧ್ಯಮಗಳ ಮೇಲೆ ಜಾಗತಿಕ ಮಟ್ಟದಲ್ಲಿ ನಿರ್ಬಂಧ ವಿಸ್ತರಿಸಿದೆ.
ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಹಿಂಸಾತ್ಮ ಕೃತ್ಯದ ಕಂಟೆಂಟ್ ಗಳು ಯೂಟ್ಯೂಬ್ ನ ಮಾರ್ಗಸೂಚಿಯನ್ನು ಉಲ್ಲಂಘಿಸುತ್ತದೆ ಎನ್ನುವ ಕಾರಣಕ್ಕೆ ಈ ನಿರ್ಬಂಧ ಹೇರಲಾಗಿದೆ ಎಂದು ಯೂಟ್ಯೂಬ್ ಹೇಳಿದೆ.
ಈ ನಿರ್ಬಂಧ ತಕ್ಷಣವೇ ಜಾರಿಗೆ ಬರುವಂತೆ ಕೆಲಸ ನಡೆಯುತ್ತಿದ್ದು, ಜಾಗತೀಕವಾಗಿ ರಷ್ಯಾದ ಸರ್ಕಾರಿ ಮಾಧ್ಯಮಗಳ ಯೂಟ್ಯೂಬ್ ಚಾನಲ್ ಗಳನ್ನು ನಿರ್ಬಂಧಿಸಲಿದ್ದೇವೆ ಎಂದಿದೆ,
ಈಗಾಗಲೇ ಗೂಗಲ್, ಫೇಸ್ ಬುಕ್ ಸಂಸ್ಥೆಗಳು ತನ್ನ ವೇದಿಕೆಗಳಲ್ಲಿ ರಷ್ಯಾ ಮೂಲದ ಜಾಹೀರಾತುಗಳಿಗೆ ನಿರ್ಬಂಧ ಹೇರಿದೆ.