August 20, 2026
Thursday, August 20, 2026
spot_img

ಐಪಿಎಲ್ ಫೈನಲ್ ಮ್ಯಾಚ್ ಗೆ ಮೋದಿ ಸ್ಟೇಡಿಯಂ ಸಜ್ಜು: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಆರ್​​ಸಿಬಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್​​ ಫೈನಲ್​ ಪಂದ್ಯಕ್ಕೆ ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂ ಸಜ್ಜಾಗಿದ್ದು, ಟಾಸ್ ಗೆದ್ದ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಈ ಟೂರ್ನಿಯಲ್ಲಿ ಗುಜರಾತ್ ವಿರುದ್ಧ ಆರ್​​ಸಿಬಿ 3 ಪಂದ್ಯಗಳನ್ನಾಡಿದ್ದು, 2-1ರಲ್ಲಿ ಮುನ್ನಡೆ ಪಡೆದುಕೊಂಡಿದೆ. ಹಾಗಾಗಿ ಈ ಪಂದ್ಯದಲ್ಲೂ ಆರ್​ಸಿಬಿ ತನ್ನ ಪ್ರಾಬಲ್ಯ ಮುಂದುವರಿಸಲು ಎದುರು ನೋಡುತ್ತಿದೆ.

ಎರಡು ತಂಡದಲ್ಲೂ ಬಲಿಷ್ಠ ಬೌಲಿಂಗ್ ಬಲ

ಆರ್‌ಸಿಬಿಯ ಬೌಲಿಂಗ್ ಘಟಕವು ಶಿಸ್ತುಬದ್ಧವಾಗಿದ್ದು, ಪವರ್ ಪ್ಲೇನಲ್ಲಿ ಎದುರಾಳಿಗಳನ್ನು ಕಟ್ಟಿಹಾಕಲು ನೆರವಾಗಿದೆ. ಇತ್ತ ಜಿಟಿ ಆರಂಭಿಕರಾದ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಸನ್ ಸ್ಫೋಟಕ ಆಟಕ್ಕಿಂತ ಸ್ಥಿರ ಆಟಕ್ಕೆ ಆದ್ಯತೆ ನೀಡಿದ್ದಾರೆ. ಜೊತೆಗೆ ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ರಶೀದ್ ಖಾನ್, ಜೇಸನ್ ಹೋಲ್ಡರ್ ಮತ್ತು ಪ್ರಸಿದ್ಧ್ ಕೃಷ್ಣ ಅವರನ್ನು ಒಳಗೊಂಡ ಅವರ ಬೌಲಿಂಗ್ ಪಡೆ ಹೊಂದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: : ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಜಾಕೋಬ್ ಡಫ್ಫಿ ಮತ್ತು ರಸಿಖ್ ಸಲಾಂ.

ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನಿಶಾಂತ್ ಸಿಂಧು, ಕಗಿಸೋ ರಬಾಡ, ಅರ್ಷದ್ ಖಾನ್ (ಸಾಯಿ ಕಿಶೋರ್ ಬದಲಿಗೆ) ಮೊಹಮ್ಮದ್ ಸಿರಾಜ್.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !