August 13, 2026
Thursday, August 13, 2026
spot_img

ಸೆಶೆಲ್ಸ್ ಸಂಸತ್‌ನಲ್ಲಿ ಹೊಸ ಇತಿಹಾಸ ಬರೆದ ಮೋದಿ: ಭಾರತದ ಸ್ನೇಹದ ಹೊಸ ಅಧ್ಯಾಯಕ್ಕೆ ಸಾಕ್ಷಿಯಾದ ಭಾಷಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೆಶೆಲ್ಸ್ ರಾಜಧಾನಿ ವಿಕ್ಟೋರಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಸಂಸತ್ತನ್ನುದ್ದೇಶಿಸಿ ಭಾಷಣ ಮಾಡಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಸೆಶೆಲ್ಸ್ ಸಂಸತ್‌ನಲ್ಲಿ ಮಾತನಾಡಿದ ಭಾರತದ ಮೊದಲ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಭಾಷಣದ ವೇಳೆ ಭಾರತದ ಸಂಸ್ಕೃತಿ, ಪರಂಪರೆ ಮತ್ತು ಎರಡೂ ರಾಷ್ಟ್ರಗಳ ನಡುವಿನ ಐತಿಹಾಸಿಕ ಬಾಂಧವ್ಯವನ್ನು ಅವರು ಪ್ರಸ್ತಾಪಿಸಿದರು.

ಇತಿಹಾಸದ ಬಾಂಧವ್ಯಕ್ಕೆ ಒತ್ತು

1770ರಲ್ಲಿ ಸೆಶೆಲ್ಸ್‌ಗೆ ತಲುಪಿದ್ದ ಮೊದಲ ಭಾರತೀಯರ ನೆನಪುಗಳನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು. ಆ ಪ್ರಯಾಣವೇ ಎರಡು ದೇಶಗಳ ನಡುವಿನ ಸ್ನೇಹದ ಅಡಿಪಾಯವಾಗಿದ್ದು, ಈ ಸಂಬಂಧವನ್ನು ಸರ್ಕಾರಗಳಿಗಿಂತ ಜನರು ಮತ್ತು ಕುಟುಂಬಗಳು ಗಟ್ಟಿಗೊಳಿಸಿದ್ದಾರೆ ಎಂದು ಹೇಳಿದರು.

ಭಾರತ ಸದಾ ನಿಮ್ಮ ಜೊತೆಗೆ

ಸೆಶೆಲ್ಸ್‌ನ ಅಭಿವೃದ್ಧಿ ಪಯಣದಲ್ಲಿ ಭಾರತ ವಿಶ್ವಾಸಾರ್ಹ ಸ್ನೇಹಿತನಾಗಿ ಮುಂದುವರಿಯಲಿದೆ ಎಂದು ಮೋದಿ ಭರವಸೆ ನೀಡಿದರು. ದ್ವೀಪ ರಾಷ್ಟ್ರದ ಪ್ರಗತಿ ಮತ್ತು ಭವಿಷ್ಯದ ಆಶಯಗಳಿಗೆ ಭಾರತ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

ಇದನ್ನೂ ಓದಿ:

ಸಂಸ್ಕೃತಿಯ ಮೂಲಕ ಬಾಂಧವ್ಯ

ಸಮೋಸಾ, ದೀಪಾವಳಿ ಮತ್ತು ನವರಾತ್ರಿ ಗರ್ಭಾ ನೃತ್ಯದಂತಹ ಭಾರತೀಯ ಸಂಸ್ಕೃತಿಯ ಅಂಶಗಳನ್ನು ಉಲ್ಲೇಖಿಸಿದ ಮೋದಿ, ಜನರ ನಡುವಿನ ಸಾಂಸ್ಕೃತಿಕ ಬಾಂಧವ್ಯವೇ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಹೇಳಿದರು.

20ನೇ ವಿದೇಶಿ ಸಂಸತ್ ಭಾಷಣ

ಪ್ರಧಾನಿ ಮೋದಿ ವಿದೇಶಿ ಸಂಸತ್ತಿನಲ್ಲಿ ನೀಡಿದ ಇದು 20ನೇ ಭಾಷಣವಾಗಿದೆ. ಭೂತಾನ್‌ನಿಂದ ಅಮೆರಿಕ ಕಾಂಗ್ರೆಸ್‌ವರೆಗೆ ಹಲವು ರಾಷ್ಟ್ರಗಳ ಸಂಸತ್ತುಗಳನ್ನು ಉದ್ದೇಶಿಸಿ ಮಾತನಾಡಿರುವ ಅವರು, ಈಗ ಸೆಶೆಲ್ಸ್‌ನಲ್ಲೂ ಹೊಸ ದಾಖಲೆಗೆ ಕಾರಣರಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !