September 12, 2026
Saturday, September 12, 2026
spot_img

ಯುದ್ಧ, ಕಡಲ್ಗಳ್ಳರ ದಾಳಿಯ ನಡುವೆ ನಾವಿಕರ ರಕ್ಷಣೆಗೆ ಮೋದಿ ಹೊಸ ಪ್ಲ್ಯಾನ್: ಶುರುವಾಗಲಿದೆ ‘ಸಪೋರ್ಟ್ ನೆಟ್‌ವರ್ಕ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ಸಂಘರ್ಷ, ಕಡಲ್ಗಳ್ಳರ ದಾಳಿ ಸೇರಿದಂತೆ ವಿವಿಧ ಅಪಾಯಗಳಿಂದ ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕುವ ನಾವಿಕರಿಗೆ ನೆರವು ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಹೊಸ ವ್ಯವಸ್ಥೆಯೊಂದನ್ನು ಪ್ರಸ್ತಾಪಿಸಿದ್ದಾರೆ.

‘ಎಮರ್ಜೆನ್ಸಿ ಸಪೋರ್ಟ್ ನೆಟ್‌ವರ್ಕ್’

ನವದೆಹಲಿಯಲ್ಲಿ ನಡೆಯುತ್ತಿರುವ 18ನೇ BRICS ಶೃಂಗಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿರುವ ಪ್ರಧಾನಿ ವಿವಿಧ ದೇಶಗಳ ಸಾಗರ ಪ್ರಾಧಿಕಾರಗಳು ಮತ್ತು ರಾಜತಾಂತ್ರಿಕ ಕಚೇರಿಗಳನ್ನು ಸಂಪರ್ಕಿಸುವ ‘ಸೀಫೇರರ್ಸ್ ಎಮರ್ಜೆನ್ಸಿ ಸಪೋರ್ಟ್ ನೆಟ್‌ವರ್ಕ್’ ಸ್ಥಾಪಿಸುವಂತೆ ಕರೆ ನೀಡಿದ್ದಾರೆ.

ಎಮರ್ಜೆನ್ಸಿ ಸಪೋರ್ಟ್ ನೆಟ್‌ವರ್ಕ್ ನಿಂದ ತುರ್ತು ಸಂದೇಶಗಳಿಗೆ ಸ್ಪಂದನೆ, ವೈದ್ಯಕೀಯ ನೆರವು, ಕುಟುಂಬ ಸದಸ್ಯರಿಗೆ ಮಾಹಿತಿ ನೀಡುವುದು ಹಾಗೂ ಅಗತ್ಯವಿದ್ದಲ್ಲಿ ಸ್ಥಳಾಂತರಿಸುವ ಕಾರ್ಯಗಳನ್ನು ವೇಗವಾಗಿ ಕೈಗೊಳ್ಳಲು ಸಾಧ್ಯವಾಗಲಿದೆ ಎಂದರು.

ಭಾರತೀಯ ನಾವಿಕರೂ ಸಂಕಷ್ಟಕ್ಕೆ ಸಿಲುಕಿದ್ದಾರೆ

ಕಳೆದ ಹಲವು ವರ್ಷಗಳಲ್ಲಿ ಸಂಘರ್ಷಗಳು ಮತ್ತು ಸಮುದ್ರ ದರೋಡೆ ಘಟನೆಗಳಿಂದ ಭಾರತೀಯ ನಾವಿಕರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಮೆರಿಕ-ಇರಾನ್ ಸಂಘರ್ಷದ ಸಂದರ್ಭದಲ್ಲಿ ಭಾರತೀಯ ಹಡಗುಗಳ ಮೇಲೆ ದಾಳಿ ನಡೆದಿರುವ ಘಟನೆಗಳಿದ್ದು, ಕೆಲ ಭಾರತೀಯ ನಾವಿಕರನ್ನು ಕಡಲ್ಗಳ್ಳರು ಅಪಹರಿಸಿರುವ ಪ್ರಕರಣಗಳೂ ವರದಿಯಾಗಿವೆ. ರಷ್ಯಾ-ಉಕ್ರೇನ್ ಸಂಘರ್ಷದ ವೇಳೆ ಕಪ್ಪು ಸಮುದ್ರ ಪ್ರದೇಶದಲ್ಲಿ ಐವರು ಭಾರತೀಯ ನಾವಿಕರು ಮೃತಪಟ್ಟಿದ್ದರು ಎಂದರು.

ಇದನ್ನೂ ಓದಿ:

ಪುಟಿನ್, ಪೆಜೆಶ್ಕಿಯನ್ ಜತೆ ನಾವಿಕರ ಸುರಕ್ಷತೆಯ ಬಗ್ಗೆ ಮಾತುಕತೆ

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯಲ್ಲೂ ಮೋದಿ ನಾವಿಕರ ಸುರಕ್ಷತೆ ಮತ್ತು ಮುಕ್ತ ಸಮುದ್ರ ಸಂಚಾರದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಪಶ್ಚಿಮ ಏಷ್ಯಾ ಹಾಗೂ ಕಪ್ಪು ಸಮುದ್ರದಲ್ಲಿನ ಸಂಘರ್ಷಗಳು ಸಮುದ್ರ ವ್ಯಾಪಾರ ಮತ್ತು ಭಾರತೀಯ ನಾವಿಕರ ಸುರಕ್ಷತೆ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !