August 23, 2026
Sunday, August 23, 2026
spot_img

‘ಅಮ್ಮ ನಾನ್ ಬ್ಯುಸಿ ಇದ್ದೀನಿ ಆಮೇಲೆ ಮಾಡ್ತೀನಿ’…… ಆಕೆಯ ಫೋನ್‌ ಕಾಲ್‌ ನಿರ್ಲಕ್ಷ್ಯ ಮಾಡೋ ಮೊದಲು ಯೋಚಿಸಿ…

ನಿಮಗೂ ಯಾವತ್ತಾದ್ರೂ ಈ ರೀತಿಯ ಅನುಭವ ಆಗಿರ್ಬಹುದು ಅಲ್ವಾ…. ನೀವು ಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇರ್ತೀರಾ ನಿಮ್ಮಮ್ಮ ಫೋನ್ ಮಾಡ್ತಾರೆ ನೀವು ‘ಹಲೋ’ ಅಂತ ಹೇಳು ಮುಂಚೆನೇ ‘ಅಮ್ಮ ಈಗ ನಾನ್ ಬ್ಯುಸಿ ಇದ್ದೀನಿ ಆಮೇಲೆ ಮಾಡ್ತೀನಿ’ ಅಂತ ಹೇಳಿ ಫೋನ್ ಕಟ್ ಮಾಡಿಬಿಡ್ತೀರಾ. ಆಮೇಲೆ ಆ ವಿಷಯ ಅಲ್ಲೇ ಮರೆತು ಬಿಡ್ತೀರಾ. ಆದ್ರೆ ನಿಮ್ಮಮ್ಮ ನಿಮ್ಮ ಒಂದು ಫೋನ್ ಗೋಸ್ಕರ ಕಾಯ್ತಾ ಇರ್ತಾರೆ.

ನಮಗೆ ಇದೊಂದು ಜಸ್ಟ್ ಅಮ್ಮನ ಫೋನ್ ಕಾಲ್ ಅಂತ ಅನ್ನಿಸಬಹುದು, ಆದ್ರೆ ಅಮ್ಮನಿಗೆ ಇದೊಂದು ಬರೀ ಫೋನ್ ಕಾಲ್ ಅಲ್ಲ ನೀವು ಆಕೆ ಜೊತೆ ಎರಡೇ ಎರಡು ನಿಮಿಷ ಮಾತಾಡಿದ್ರು ಸಾಕು ಇಡೀ ದಿನ ನಿಮ್ಮನ್ನೇ ನೆನಪ್ ಮಾಡ್ಕೊಂಡು ಖುಷಿಯಾಗಿರ್ತಾಳೆ.

ಕಾಳಜಿ ತೋರಿಸೋ ರೀತಿ ಇದು

ಅಮ್ಮ ಫೋನ್ ಮಾಡ್ತಾಳೆ ‘ಊಟ ಆಯ್ತಾ? ಎಲ್ಲಿದ್ದೀಯಾ? ಟೈಮ್ ಟೈಮಿಗೆ ಊಟ ತಿಂಡಿ ಮಾಡು’ ಅಂತ ಪ್ರತಿಸಲನೂ ಫೋನ್ ಮಾಡಿದಾಗ ಕೇಳ್ತಾಳೆ ಹೇಳ್ತಾಳೆ ನಿಮಗೆ ಸುಮಾರ್ ಸಲ ಇದೇ ಪ್ರಶ್ನೆ ಕೇಳಿ ಕೇಳಿ ಕಿರಿಕಿರಿ ಅನ್ನಿಸಬಹುದು ಆದರೆ ಆ ಕಿರಿಕಿರಿ ಆ ಪ್ರಶ್ನೆಗಳ ಹಿಂದಿರುವ ಆಕೆಯ ಕಾಳಜಿ ಮತ್ತು ಪ್ರೀತಿ ನಾವ್ಯಾವತ್ತು ಮರಿಬಾರ್ದು.

ಈಗ ನಾವೆಲ್ಲ ದೊಡ್ಡವರಾಗಿದ್ದೇವೆ.. ನಮಗೆ ಪದೇ ಪದೇ ಹೇಳ್ಬೇಕು ಅಂತ ಇಲ್ಲ. ಊಟ ಮಾಡಿದ್ಯಾ? ತಿಂದ್ಯಾ? ಮಲಗಿದ್ಯಾ? ಅಂತ ಆದ್ರೆ ನಮ್ಮಮ್ಮ ನಾವು ಎಷ್ಟು ದೊಡ್ಡವರಾದ್ರೂ ಈ ಪ್ರಶ್ನೆಗಳನ್ನು ಕೇಳೋದನ್ನ ಬಿಡೋದಿಲ್ಲ. ಯಾಕಂದ್ರೆ ನಮ್ಮಮ್ಮಂಗೆ ನಾವಿನ್ನು ಅದೇ ಸಣ್ಣ ಮಗು……

ಅವಳು ಕರೆ ಮಾಡೋದು ನಿಮ್ಮಿಂದ ಕೆಲಸ ಆಗ್ಬೇಕಂತ ಅಲ್ಲ

ನಿಮ್ಮಮ್ಮ ಫೋನ್ ಮಾಡಬೇಕು ಅಂದ್ರೆ ಅವಳಿಗೇನು ಹಣ ಬೇಕು ಅಥವಾ ಏನು ಔಷದ ಬೇಕು ಏನೋ ನಿಮ್ಮಿಂದ ಕೆಲಸ ಆಗ್ಬೇಕು ಅಂತ ಅಲ್ಲ, ಬರೀ ನಿಮ್ ಜೊತೆಗೆ ಎರಡು ನಿಮಿಷ ಮಾತಾಡ್ಬೇಕು ಅನ್ನೋ ಆಸೆ ಅಷ್ಟೇ ಅವಳಿಗೆ ಅವಳು ‘ಏನ್ ಮಾಡ್ತಿದ್ಯಾ?’ ಅಂದ್ರೆ ನಿನ್ನ ನೆನಪಿಸಿಕೊಳ್ಳುತ್ತಾಳೆ ಅಂತ ಅರ್ಥ ‘ಸಮಯಕ್ಕೆ ಸರಿಯಾಗಿ ಊಟ ಮಾಡು ಮಗ’ ಅಂದ್ರೆ ನಿನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿಸುತ್ತಿದ್ದಾಳೆ ಅಂತ ಅರ್ಥ. ಆದರೆ ಇದನ್ನೆಲ್ಲಾ ನಾವು ಅರ್ಥನೇ ಮಾಡಿಕೊಳ್ಳದೆ ಹೋಗಿಬಿಡ್ತೇವೆ.

ನಾವು ಐದು ವರ್ಷ ಇದ್ದಾಗಲೂ ಹೇಗೆ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತಿದ್ಳು 25 ವರ್ಷ ಅದಾಗಲೂ ಅದೇ ರೀತಿ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತಾಳೆ ಆದ್ರೆ ವ್ಯತ್ಯಾಸ ಇಷ್ಟೇ, ಐದು ವರ್ಷ ಇದ್ದಾಗ ನಾವು ಅವಳ ಪಕ್ಕದಲ್ಲಿ ಇದ್ವಿ ಆದ್ರೆ 25 ವರ್ಷ ಆದಾಗ ಆ ಒಂದು ಫೋನ್ ಗಾಗಿ ಅದೇ ಪ್ರೀತಿ ಕಾಳಜಿಯಿಂದ ಕಾಯ್ತಾ ಇರ್ತಾಳೆ.

“ಅವಳು ಮತ್ತೆ ಕರೆ ಮಾಡ್ತಾಳೆ” ಅನ್ಕೋಬೇಡಿ

ನೀವು ನಿರ್ಲಕ್ಷ ಮಾಡೋ ಅವಳ ಒಂದು ಫೋನ್ ಕಾಲ್ ನಾಳೆ ಮತ್ತೆ ವಾಪಸ್ ಬರಬಹುದು ಅನ್ನೋ ಖಾತರಿ ನಮಗಿಲ್ಲ… ಆದ್ರೆ ಜೀವನಪೂರ್ತಿ ಹಾಗೆ ಫೋನ್ ಕಾಲ್ ಗಳು ಬರುತ್ತವೆ ಅನ್ನೋ ಖಾತರಿ ಕೂಡ ಇಲ್ಲ. ‘ಅಮ್ಮ ಆಮೇಲೆ ಕಾಲ್ ಮಾಡ್ತೀನಿ’ ಅನ್ನೋ ಅವಕಾಶ ಈಗ ಇರಬಹುದು ಮುಂದೆ ಬರದೆಯೂ ಇರಬಹುದು. ಅಮ್ಮನ ಜೊತೆ ಮಾತನಾಡಲು ಬಾಕಿ ಉಳಿದ ಮಾತುಗಳು ಹೇಳಬೇಕಿದ್ದ ಪ್ರಶ್ನೆಗಳು ಹೇಳಬೇಕಿದ್ದ ಮಾತುಗಳು ಎಲ್ಲವೂ ನೆನಪಾಗಿ ಉಳಿಯಬಹುದು. ಅದಿಕ್ಕೆ ಮತ್ತೊಮ್ಮೆ ಹೇಳ್ತಿದ್ದೇನೆ ಅಮ್ಮನ ಫೋನ್ ಕಾಲ್ ಯಾವತ್ತು ಇಗ್ನೋರ್ ಮಾಡಬೇಡಿ.

ನಾವು ಜೀವನದಲ್ಲಿ ಏನನ್ನು ಸಾಧಿಸುತ್ತೇವೆ, ಸಿಕ್ಕಾಪಟ್ಟೆ ಹಣ ಸಂಪಾದಿಸುತ್ತವೆ, ಮನೆ ಕಟ್ಟುತ್ತೇವೆ, ಕಾರ್ ತಗೋಳ್ತೀವಿ, ಟ್ರಿಪ್ ಟ್ರಾವೆಲ್ ಎಲ್ಲ ಮಾಡ್ತೇವೆ ಎಲ್ಲದ್ರ ನಡುವೆ ನಮ್ಮನ್ನ ನೋಡಿ ಖುಷಿ ಪಡೋಳು ಅಂದ್ರೆ ಅಮ್ಮ ಮಾತ್ರ. ಅಂಥವಳೊಂದಿಗೆ ಒಂದು ಐದು ನಿಮಿಷ ಮಾತಾಡೋಕೆ ಟೈಮ್ ಇಲ್ಲ ಅಂದ್ರೆ ಸಿಕ್ಕ ದೊಡ್ಡ ಯಶಸ್ಸಿಗೆ ಅರ್ಥ ಏನಿದೆ?

ಸಿಕ್ಕಾಪಟ್ಟೆ ಎಮೋಷನಲ್ ಆಯ್ತು ಅನ್ಸುತ್ತೆ ಅಲ್ವಾ? ಪರ್ವಾಗಿಲ್ಲ… ಇವತ್ತು ನಿಮ್ಮ ಅಮ್ಮ ಫೋನ್ ಮಾಡಿದ್ರಾ? ನೀವ್ ರಿಸೀವ್ ಮಾಡಿ ‘ಬ್ಯುಸಿ ಇದ್ದೀನಿ ಮತ್ತೆ ಮಾಡ್ತೀನಿ’ ಅಂತ ಹೇಳಿದ್ರಾ? ಇನ್ನೊಮ್ಮೆ ಹೀಗೆ ಹೇಳು ಮುಂಚೆ ಯೋಚ್ನೆ ಮಾಡಿ.

ಆಶಿಕಾ ಸಾಲೆತ್ತೂರು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !