ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಪತ್ನಿ ಮೊನಾಲಿಸಾ ಗರ್ಭಿಣಿ, ಹೀಗಾಗಿ ಯಾವುದೇ ವಿಚಾರಣೆಗೆ ಕರೆತರಲು ಕಷ್ಟವಾಗುತ್ತದೆ. ಆಕೆಗೆ ಪ್ರಯಾಣ ಮಾಡದಂತೆ ವೈದ್ಯರು ಹೇಳಿದ್ದಾರೆ ಎಂದು ಪತಿ ಫರ್ಮಾನ್ ಖಾನ್ ಹೇಳಿದ್ದಾರೆ.
ಕುಂಭಮೇಳದಿಂದ ಫೇಮಸ್ ಆದ ಚೆಲುವೆ ಮೊನಾಲಿಸಾ ಇತ್ತೀಚೆಗಷ್ಟೇ ಮದುವೆ ವಿಷಯದಲ್ಲಿ ಮತ್ತೆ ಸುದ್ದಿಗೆ ಬಂದಿದ್ದರು. ಕೇರಳದಲ್ಲಿ ಮುಸ್ಲಿಂ ಯುವಕ ಫರ್ಮಾನ್ ಖಾನ್ ಜೊತೆ ಮೊನಾಲಿಸಾ ಮದುವೆಯಾಗಿದ್ದರು. ಇದಾದ ನಂತರ ಮೋನಾಲಿಸಾ ಮೈನರ್ ಎನ್ನುವ ವಿಷಯ ಬೆಳಕಿಗೆ ಬಂದಿತ್ತು. ಇದರಿಂದ ಫರ್ಮಾನ್ ಖಾನ್‌ಗೆ ಕಾನೂನು ಸಂಕಷ್ಟ ಎದುರಾಗಿತ್ತು. ಇದೆಲ್ಲ ಆದ ನಂತರ ನನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ಕೂಡ ಫರ್ಮಾನ್ ದೂರು ದಾಖಲಿಸಿದ್ದರು.
ಇದೀಗ ಪ್ರೆಗ್ನೆನ್ಸಿ ವಿಚಾರ ತೆಗೆದಿದ್ದು, ಇದು ನಿಜವೇ ಇಲ್ಲವೇ ಪರೀಕ್ಷೆಯ ನಂತರ ದೃಢಪಡಲಿದೆ. ಮೊನಾಲಿಸಾರನ್ನು ಪೊಲೀಸರು ವಿಚಾರಣೆಗೆ ಕರೆದ ವೇಳೆ ಫರ್ಮಾನ್ ಖಾನ್, ಆಕೆ ಗರ್ಭಿಣಿ ಈಗ ಓಡಾಟ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಪೊಲೀಸರು ವೈದ್ಯಕೀಯ ವರದಿಯನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮದ ಬಗ್ಗೆ ಆಲೋಚಿಸಲಿದ್ದಾರೆ.



