ಮಂಕೀಪಾಕ್ಸ್:‌ ಆಗ್ನೇಯ ಏಷ್ಯಾ ದೇಶಗಳಿಗೆ ಎಚ್ಚರಿಕೆ ವಹಿಸುವಂತೆ ಕರೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

ಹೊಸದಿಗಂತ ಡಿಜಿಟಲ್ ಡೆಸ್ಕ್:‌
ಮಂಕಿಫಾಕ್ಸ್‌ ವೈರಸ್‌ ಸುಮಾರು 75 ದೇಶಗಳಲ್ಲಿ ವ್ಯಾಪಿಸಿದ್ದು ಮಂಕಿಪಾಕ್ಸ್‌ನ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಬಲಪಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಆಗ್ನೇಯ ಏಷ್ಯಾದ ದೇಶಗಳಿಗೆ ಕರೆ ನೀಡಿದೆ. ಮಂಕಿಪಾಕ್ಸ್‌ ಅನ್ನು ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಲಾಗಿದೆ.

ನಿನ್ನೆಯಷ್ಟೇ ವಿಶ್ವ ಆರೋಗ್ಯ ಸಂಸ್ಥೆಯು 74 ದೇಶಗಳಲ್ಲಿ ಸುಮಾರು 17,000 ಜನರ ಮೇಲೆ ಪರಿಣಾಮ ಬೀರಿದ ಮಂಕಿಪಾಕ್ಸ್ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತ್ತು ಪ್ರಸ್ತುತ ಆಗ್ನೇಯ ಏಷ್ಯಾ ರಾಷ್ಟ್ರಗಳು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಹೇಳಿದೆ.

ಈ ರೋಗವು ಸಲಿಂಗಿಗಳಲ್ಲಿ ಅಧಿಕವಾಗಿ ಕಂಡುಬಂದಿದ್ದು ವೈರಸ್ ವೇಗವಾಗಿ ಹರಡುತ್ತಿದೆ ಮತ್ತು ಇದನ್ನು ಮೊದಲು ನೋಡದ ದೇಶಗಳಿಗೆ ಹರಡುತ್ತಿದೆ ಎಂದು ಡಬ್ಲ್ಯುಎಚ್‌ಒ ಆಗ್ನೇಯ ಏಷ್ಯಾ ವಲಯದ ಪ್ರಾದೇಶಿಕ ನಿರ್ದೇಶಕ ಡಾ ಪೂನಂ ಖೇತ್ರಪಾಲ್ ಸಿಂಗ್ ಉಲ್ಲೇಖಿಸಿದ್ದಾರೆ. ಈ ರೋಗವು ಹೆಚ್ಚಿನದಾಗಿ ಪಶ್ಚಿಮ ಮತ್ತು ಮಧ್ಯ ಆಫ್ರಿಕಾದ ದೇಶಗಳಲ್ಲಿ ಸ್ಥಳೀಯವಾಗಿ ವ್ಯಾಪಿಸಿತ್ತು ಆದರೆ ಮೇ ಆರಂಭದಿಂದಲೂ ಸೋಂಕುಗಳ ಉಲ್ಬಣವು ವರದಿಯಾಗಿದ್ದು ಪ್ರಸ್ತುತ 75ಕ್ಕೂ ಹೆಚ್ಚಿನ ದೇಶಗಳಿಗೆ ವ್ಯಾಪಿಸಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!