ರಾಂಚಿ ಅಣೆಕಟ್ಟಿನಲ್ಲಿ 8,000ಕ್ಕೂ ಅಧಿಕ ಮೀನುಗಳು ಸಾವು, ತನಿಖೆಗೆ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಂಚಿಯ ಅಣೆಕಟ್ಟಿನಲ್ಲಿ 8,000ಕ್ಕೂ ಅಧಿಕ ಮೀನುಗಳು ಸಾವನ್ನಪಿರುವುದು ಕಂಡುಬಂದಿದ್ದು, ಮೀನುಗಾರಿಕೆ ಇಲಾಖೆ ಘಟನೆಯ ಬಗ್ಗೆ ತನಿಖೆ ನಡೆಸಲು ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಗೆಟಲ್ಸುಡ್ ಅಣೆಕಟ್ಟಿನಲ್ಲಿ ಮೀನು ಸಾಕಣೆಗೆಂದು ಹಾಕಲಾಗಿದ್ದ ನಾಲ್ಕು ಪಂಜರಗಳಲ್ಲಿ 500 ಗ್ರಾಂನಿಂದ 1 ಕೆಜಿ ತೂಕದ ಮೀನುಗಳು ಸಾವನ್ನಪ್ಪಿವೆ.

ರಾಜ್ಯ ಕೃಷಿ ಸಚಿವ ಬಾದಲ್ ಪತ್ರಲೇಖ್ ಶನಿವಾರ ಸಂಜೆ ಈ ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಭಾನುವಾರದಂದು ಈ ಬಗ್ಗೆ ತನಿಖೆ ನಡೆಸಿ ಶೀಘ್ರವೇ ವರದಿ ಸಲ್ಲಿಸುವಂತೆ ಇಲಾಖೆ ಕಾರ್ಯದರ್ಶಿಗೆ ಬಾದಲ್ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!