ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ತಮ್ಮ ಹುಟ್ಟುಹಬ್ಬದಂದು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ದ್ವಾರಕಾ ಸೆಕ್ಟರ್ 21ರಿಂದ ವಿಸ್ತರಿಸಲಾದ ಹೊಸ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್ ಅನ್ನು ಮೋದಿ ಉದ್ಘಾಟಿಸಿದರು. ನಂತರ ಮೆಟ್ರೋದಲ್ಲಿ ಪ್ರಯಾಣಿಸಿ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಮೆಟ್ರೋದಲ್ಲಿ ಪ್ರಯಾಣಿಸಿದ ಯುವಕ-ಯುವತಿಯರು, ಮಹಿಳೆಯರು, ಪುರುಷರೊಂದಿಗೆ ಸಂವಾದ ನಡೆಸಿದರು. ಪುಟ್ಟ ಮಕ್ಕಳಿಗೆ ಚಾಕ್ಲೆಟ್-ಬಿಸ್ಕೆಟ್ ಕೊಟ್ಟು ಅವರೊಂದಿಗೆ ಕೆಲಕಾಲ ಹರಟೆ ಹೊಡೆದರು. ಮೋದಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯಾಣಿಕರು ಪೈಪೋಟಿ ನಡೆಸಿದರು.