RECIPE| ಗಣೇಶ ಹಬ್ಬಕ್ಕೆ ಶುಗರ್‌ ಫ್ರೀ ಡ್ರೈ ಫ್ರೂಟ್ಸ್‌ ಮೋದಕ, ರುಚಿಯೂ ಅಮೋಘ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಡೊಳ್ಳು ಹೊಟೆ ಗಣಪನಿಗೆ ಮೋದಕ ಅಂದರೆ ಬಲುಪ್ರಿಯ. ನಾಳೆಯೇ ಗಣಪತಿ ಹಬ್ಬ ಪ್ರತಿಯೊಬ್ಬರ ಮನೆಯಲ್ಲೂ ಮೋದಕದ ಘಮಲು ಬರುತ್ತದೆ. ತಹರೇವಾರಿ ಮೋದಕಗಳು ಇತ್ತೀಚೆಗೆ ಬೆಳಕಿಗೆ ಬರುತ್ತಿವೆ. ಅದರಲ್ಲಿ ಡ್ರೈ ಫ್ರೂಟ್ಸ್‌ ಮೋದಕವೂ ಒಂದು. ಇದರಲ್ಲಿ ಸಕ್ಕರೆ ಅಂಶ ಇರುವುದಿಲ್ಲ, ಮಧುಮೇಹಿಗಳೂ ತಿನ್ನಬಹುದಾದ ಆರೋಗ್ಯಕರ ತಿಂಡಿ. ಹಾಗಾದ್ರೆ ಮಾಡೋದೇಗೆ ನೋಡೋಣ ಬನ್ನಿ.

ಬೇಕಾಗುವ ಪದಾರ್ಥಗಳು:

ಖರ್ಜೂರ-1 ಕಪ್, ಒಣದ್ರಾಕ್ಷಿ-10, ಪಿಸ್ತಾ-10, ಕತ್ತರಿಸಿದ ಗೋಡಂಬಿ-8, ಬಾದಾಮಿ-8, ಒಣ ಕೊಬ್ಬರಿ ಪುಡಿ-ಒಂದು ಕಪ್, ಗಸಗಸೆ-2 ಚಮಚ, ತುಪ್ಪ-2 ಚಮಚ, ಅಕ್ಕಿಹಿಟ್ಟು-ಒಂದು ಕಪ್‌, ನೀರು-ಸಾಕಷ್ಟು.

ಮಾಡುವ ವಿಧಾನ

ಮೊದಲಿಗೆ ಒಂದು ಬಾಣಲೆಯನ್ನು ಒಲೆ ಮೇಲಿರಿಸಿ ತುಪ್ಪವನ್ನು ಬಿಸಿ ಮಾಡಿ. ಗಸಗಸೆಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಈಗ ಎಲ್ಲಾ ಒಣ ಹಣ್ಣುಗಳನ್ನು ಕತ್ತರಿಸಿ, ಬಾಣಲೆಗೆ ಸೇರಿಸಿ ಫ್ರೈ ಮಾಡಿ. ನಂತರ ತೆಂಗಿನ ಪುಡಿ ಹಾಕಿ ಹುರಿಯಿರಿ. ಇದರ ನಂತರ, ಖರ್ಜೂರವನ್ನು ಬ್ಲೆಂಡರ್ನಲ್ಲಿ ಹಾಕಿ ಮೃದುವಾದ ಪೇಸ್ಟ್ ಮಾಡಿಕೊಳ್ಳಿ. ಈಗ ಹುರಿದ ಒಣ ಹಣ್ಣುಗಳನ್ನು ಖರ್ಜೂರದ ಮಿಶ್ರಣದೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಮೋದಕ ಮಿಶ್ರಣವನ್ನು ತಯಾರಿಸಿ ತಣ್ಣಗಾಗಲು ಬಿಡಿ.

ಇತ್ತ ನತ್ತೊಂದು ಪಾತ್ರೆಯಿಟ್ಟು ಎರಡು ಕಪ್‌ ನೀರು ಹಾಕಿ ಸ್ವಲ್ಪ ಉಪ್ಪು ಹಾಕಿ ಕುದಿಸಿ ಬಳಿಕ ಅದಕ್ಕೆ ಅಕ್ಕಿ ಹಿಟ್ಟು ಹಾಕಿ ಗಟ್ಟಿಯಾಗಿ ಮುದ್ದೆ ಹದಕ್ಕೆ ಕಲಸಿ. ಕೆಳಗಿಳಿಸಿ ಹತ್ತು ನಿಮಿಷ ಬಿಟ್ಟು ಕೈಗೆ ತುಪ್ಪ ಸವರುತ್ತಾ ಕೈಯಲ್ಲಾದರೂ ಸರಿಯೇ ಮೋದಕ ಮಾಡುವ ಅಚ್ಚಾದರೂ ಸರಿಯೇ ಅದಕ್ಕೆ ಹಿಟ್ಟನ್ನು ಹಿಟ್ಟು ಒಳಕ್ಕೆ ಟ್ರೈಫ್ರೂಟ್ಸ್‌ ಮುಶ್ರಣ ಸ್ಟಫ್‌ ಮಾಡಿ ಅಚ್ಚನ್ನು ಒತ್ತಿದರೆ ಮೋದಕ ತಯಾರು.

ಪುಟ್ಟ ಗಣಪನಿಗೆ ನೈವೇದ್ಯ ಮಾಡಿ ನೀವೂ ಮನೆ ಮಂದಿಯೊಂದಿಗೆ ಸವಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!