ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾದ ಭಾರತೀಯ ರೈಲ್ವೆ: ಇನ್ಮುಂದೆ ಮನೆಯ ಬಾಗಿಲಿಗೇ ಬರಲಿದೆ ಪಾರ್ಸೆಲ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ರೈಲ್ವೆ ಅಂದರೆ ಅದು ಜನಸಾಮಾನ್ಯರ ಜೀವನದ ಅವಿಭಾಜ್ಯ ಅಂಗ . ಇಲ್ಲಿ ಜನರು ಕೇವಲ ಓಡಾಟ ನಡೆಸುವುದು ಮಾತ್ರವಲ್ಲದೆ, ಅನೇಕ ವಸ್ತುಗಳ ಪಾರ್ಸೆಲ್‌ಗಳನ್ನು ಮಾಡುತ್ತಾರೆ.
ಈ ರೀತಿ ರೈಲ್ವೆಯಲ್ಲಿ ಕಳುಹಿಸಲಾಗುತ್ತಿದ್ದ ಪಾರ್ಸೆಲ್‌ಗಳನ್ನು ರೈಲು ನಿಲ್ದಾಣಕ್ಕೆ ಹೋಗಿ ಪಡೆದುಕೊಂಡು ಬರಬೇಕಿತ್ತು. ಆದರೆ ಇದೀಗ ಇಲಾಖೆ ಜನರಿಗೆ ಇನ್ನಷ್ಟು ಹತ್ತಿರವಾಗಿದೆ.
ಭಾರತೀಯ ರೈಲ್ವೆ ವಿವಿಧ ವಿಷಯಗಳಲ್ಲಿ ಮೇಲ್ದರ್ಜೆಗೆ ಏರುತ್ತಿರುವ ಈ ಸಂದರ್ಭದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಪಾರ್ಸೆಲ್‌ಗಳನ್ನು ಮನೆ ಬಾಗಿಲಿಗೆ ತರುವ ಯೋಜನೆ ಆರಂಭಿಸಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿದ್ದು, ಶೀಘ್ರವೇ ಇದು ಜನ ಸಾಮಾನ್ಯರಿಗೆ ಲಭ್ಯವಾಗಲಿದೆ.
ದೇಶದ ಯಾವುದೇ ಮೂಲೆಯಿಂದ ಚಿಕ್ಕಪುಟ್ಟ ವಸ್ತುಗಳಿಂದ ಹಿಡಿದು ಬೃಹದಾಕಾರದ ವಸ್ತುಗಳನ್ನು ಪಾರ್ಸೆಲ್‌ ಕಳುಹಿಸಿದರೆ ಅದು ಯಾರಿಗೆ ತಲುಪಬೇಕೋ ಅವರ ಮನೆಯ ಬಾಗಿಲಿಗೇ ಮುಟ್ಟಲಿದೆ.
ಇದಕ್ಕಾಗಿ ಮೊಬೈಲ್‌ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವ ಅಗತ್ಯವಿದ್ದು, ಅದರ ಕುರಿತು ಸಂಪೂರ್ಣ ವಿವರವನ್ನು ರೈಲ್ವೆ ಇಲಾಖೆ ಶೀಘ್ರದಲ್ಲಿ ನೀಡಲಿದೆ. ಬೇರೆಲ್ಲಾ ಕೋರಿಯರ್‌ ಸರ್ವೀಸ್‌ಗಳಂತೆ ಈ ಅಪ್ಲಿಕೇಶನ್ ಸಹಾಯದಿಂದ ವಸ್ತುಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.
ಈಬಗ್ಗೆ ರೈಲ್ವೆಯು ಮನೆ-ಮನೆಗೆ ವಿತರಣಾ ಸೇವೆಯ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸುತ್ತಿದೆ. ಈ ಮೂಲಕ ದೂರದ ಊರುಗಳಿಂದ ನಮಗೆ ಬೇಕಾಸ ವಸ್ತುಗಳನ್ನು ರೈಲು ಸೇವೆ ಮೂಲಕವೂ ಸುಲಭವಾಗಿ ಪಡೆಯಬಹುದು ಎಂದು ಇಲಾಖೆ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!