September 7, 2026
Monday, September 7, 2026
spot_img

‘ವಿದ್ಯಾವಂತರಿಗಿಂತ ಅಂಡರ್‌ವರ್ಲ್ಡ್‌ ಏರಿಯಾದಲ್ಲೇ ಹೆಚ್ಚು ಮತ’: ಹಲ್ ಚಲ್ ಸೃಷ್ಟಿಸಿದ ಗಡ್ಕರಿ ಹೇಳಿಕೆಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಹೇಳಿಕೆ ಇದೀಗ ರಾಜಕಾರಣದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗ್ತಿದೆ.

ನಾಗಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, ಚುನಾವಣೆಯಲ್ಲಿ ನಗರದ ಕೆಲವು ಅತ್ಯಂತ ವಿದ್ಯಾವಂತ ಪ್ರದೇಶಗಳಿಗಿಂತ ಅಂಡರ್‌ವರ್ಲ್ಡ್ ಹಾಗೂ ರೆಡ್‌ಲೈಟ್ ಪ್ರದೇಶಗಳೆಂದು ಗುರುತಿಸಲ್ಪಡುವ ಭಾಗಗಳಿಂದಲೇ ತಮಗೆ ಹೆಚ್ಚಿನ ಪ್ರಮಾಣದ ಮತಗಳು ಬಂದಿದ್ದವು ಎಂದು ಹೇಳಿದ್ದಾರೆ.

92ರಷ್ಟು ಮತಗಳು ಸಿಕ್ಕಿದ್ದವು

ವಿದ್ಯಾವಂತ ಹಾಗೂ ದೊಡ್ಡ ದೊಡ್ಡ ಪ್ರದೇಶಗಳಿಂದ ಬರುವ ಮತದಾನಕ್ಕಿಂತ ಅಂಡರ್‌ವರ್ಲ್ಡ್ ಹಾಗೂ ರೆಡ್‌ಲೈಟ್ ಪ್ರದೇಶಗಳಲ್ಲಿ ಸುಮಾರು 92ರಷ್ಟು ಮತಗಳು ಸಿಕ್ಕಿದ್ದವು. ಹಾಗಂತ ಇಂತಹ ಪ್ರದೇಶಗಳ ಜನರ ಬೆಂಬಲವನ್ನು ಅಪರಾಧ ಚಟುವಟಿಕೆಗಳಿಗೆ ಬೆಂಬಲವೆಂದು ಅರ್ಥೈಸಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:

ಸಾಮಾಜಿಕ ಕಾರ್ಯಗಳ ಮೂಲಕ ಜನ ಸಂಪರ್ಕ

ನಾಗಪುರದಲ್ಲಿ ಅಂಡರ್‌ವರ್ಲ್ಡ್ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಸಂಬಂಧಿಸಿದ ಸುಮಾರು ಶೇ.99ರಷ್ಟು ಜನರು ತಮ್ಮ ಬೆಂಬಲಿಗರಾಗಿದ್ದಾರೆ ಎಂದು ಗಡ್ಕರಿ ತಮಾಷೆಯಾಗಿ ಹೇಳಿದ್ದಾರೆ. ಇಂತಹ ಪ್ರದೇಶಗಳಲ್ಲಿ ಅಭಿವೃದ್ಧಿ ಹಾಗೂ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದು ಆ ಮೂಲಕ ಅಲ್ಲಿನ ಜನರೊಂದಿಗೆ ಉತ್ತಮ ಸಂಪರ್ಕ ಬೆಳೆದಿದೆ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !