Saturday, December 9, 2023

Latest Posts

ತಾಯಿಯ ಋಣ ತೀರಿಸಲು ಸಾಧ್ಯವೇ ಇಲ್ಲ: ಭಾವುಕರಾದ ಬಸವರಾಜ ಹೊರಟ್ಟಿ

ಹೊಸದಿಗಂತ ವರದಿ ಹುಬ್ಬಳ್ಳಿ:

ಜಗತ್ತಿನಲ್ಲಿ ತಾಯಿ ಋಣ ತಿರಿಸಲು ಯಾರಿಂದಲೂ ಸಾಧ್ಯವಿಲ್ಲ. ತನ್ನ ಸರ್ವಸ್ವ ತ್ಯಾಗ ಮಾಡಿ ಮಕ್ಕಳ ಭವಿಷ್ಯ ರೂಪಿಸುತ್ತಾಳೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಇಲ್ಲಿಯ ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡ್ ನ ನಲ್ಲಿ ಶ್ರೀಮತಿ ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಹಾಗೂ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲವನ್ನೂ ಸಹಿಸಿಕೊಳ್ಳುವ ಗುಣ ಭೂಮಿಗೆ ಇದೆ. ಪ್ರಕೃತಿ, ಭೂಮಿ ಸೇರಿ ಪವಿತ್ರ ಸ್ಥಾನಗಳನ್ನು ತಾಯಿಗೆ ಹೊಲಿಸುತ್ತಾರೆ. ತಾಯಿ ಸಹ ಕುಟುಂಬದಲ್ಲಿ ಬರುವ ಎಲ್ಲವನ್ನೂ ಸಹಿಸಿಕೊಂಡು ನಿಭಾಯಿಸುತ್ತಾಳೆ. ಜಗತ್ತಿನಲ್ಲಿ ಎಲ್ಲವನ್ನೂ ಪಡೆಯಬಹುದು. ಆದರೆ ಕಳೆದು ಹೋದ ತಾಯಿ ಪಡೆಯಲು ಸಾಧ್ಯವಿಲ್ಲ. ತಾಯಿ ಎನ್ನುವುದಕ್ಕೆ ಬಹಳಷ್ಟು ಮಹತ್ವವಿದೆ ಎಂದರು.

ಶಾಸಕ ಬಸವರಾಜ ಬೊಮ್ಮಾಯಿ, ಬದುಕು ತಾಯಿ ಕೃಪೆ ಯಿಂದಾಗಿದ್ದು, ಬದಕಿಗಿಂತ ತಾಯಿಯ ತನ ದೊಡ್ಡದಾಗಿದೆ. ತಾಯಿಯ ಕರಳು, ಭಾವನೆ, ಗುಣ ಧರ್ಮ ಯಾವುದೇ ಜಾತಿ, ಧರ್ಮ, ದೇಶ ಹಾಗೂ ಭಾಷೆ ಇದ್ದರು ಅದು ಒಂದೇ ಯಾಗಿರುತ್ತದೆ ಎಂದರು.

ಜನ್ಮ ಪೂರ್ವದಲ್ಲಿ ಯಾವುದಾದರೂ ಸಂಬಂಧವಿದ್ದರೆ ಅದು ತಾಯಿ ಮಗನ ಸಂಬಂಧವಾಗಿದೆ. ತಾಯಿ ಮಗನ ಸಂಬಂಧ ದೇವರಿಗೆ ಮೀಗಿಲಾಗಿದ್ದು. ನನ್ನ ತಾಯಿ ಬಗ್ಗೆ ಇರುವ ಭಾವನೆಗಳ ವ್ಯಕ್ತ ಮಾಡುವುದು ಶಬ್ಧಗಳಿಂದ ಸಾಧ್ಯವಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಪಾದಕ ಚಂದ್ರಶೇಖರ ವಸ್ತ್ರದ ಅವರ ಸಾಮಾನ್ಯರ ಅಸಾಮಾನ್ಯ ಅವ್ವ ಎಂಬ ಪುಸ್ತಕ ಅನಾವರಣಗೊಳಿಸಲಾಯಿತು. ಪ್ರಾಚಾರ್ಯ ರಮೇಶ ಕಲ್ಲನಗೌಡ ಪುಸ್ತಕ ಪರಿಚಯಿಸಿದರು. ಸಾಹಿತಿ ಹೇಮಾ ಪಟ್ಟಣಶೆಟ್ಟಿ ಅವರಿಗೆ ಅಕ್ಕ ಪ್ರಶಸ್ತಿ, ಅರಳು ಮೊಗ್ಗು ಪ್ರಶಸ್ತಿ ನೇಹಾ ರಾಮಾಪೂರ, ಜಾನಪದ ಸಿರಿ ಪ್ರಶಸ್ತಿ ಹೊರೆಯಾಲ ದೊರೆಸ್ವಾಮಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಲ್ಲಿಕಾರ್ಜುನ ಬೊಮ್ಮಾಯಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!