ಅಕ್ಕ ಮಹಾದೇವಿ ಸ್ಮಾರಕ ಕೇಂದ್ರ ಸ್ಥಳಕ್ಕೆ ಸಂಸದ ರಾಘವೇಂದ್ರ ಭೇಟಿ

ಹೊಸದಿಗಂತ ವರದಿ, ಶಿವಮೊಗ್ಗ:

ಶಿವಶರಣೆ ಅಕ್ಕ ಮಹಾದೇವಿ ಅವರ ಜನ್ಮ ಸ್ಥಳ ಉಡುತಡಿಯಲ್ಲಿ ನಿರ್ಮಾಣ ಆಗುತ್ತಿರುವ ಸ್ಮಾರಕ ಕೇಂದ್ರ ಸ್ಥಳಕ್ಕೆ ಸಂಸದ ಬಿ. ವೈ ರಾಘವೇಂದ್ರ ಭೇಟಿ ನೀಡಿ ಪ್ರಗತಿ ಪರಿಶೀಲನಾ ಸಭೆ ನೆಡೆಸಿದರು.
ಸ್ಥಳದಲ್ಲಿ ಆಗಬೇಕಾದ ಕೆಲಸಗಳ ವೇಗವನ್ನು ಹೆಚ್ಚಿಸಲು ಅಧಿಕಾರಿಗಳಿಗೆ ಸೂಚನೆ‌ ನೀಡಿದರು.
ಗ್ರಾಮೀಣ ಸೊಗಡು, ಮತ್ತು ವಿಶಿಷ್ಟ ವಸ್ತು ಶಿಲ್ಪಕ್ಕೆ ಆದ್ಯತೆ ನೀಡಬೇಕು, ಮಳೆಗಾಲಕ್ಕೂ ಮುನ್ನ ಕಾಮಗಾರಿ ಮುಕ್ತಾಯ ಮಾಡಲು ತಿಳಿಸಿದರು.
ಅಕ್ಕ ಮಹಾದೇವಿಯವರ ಪ್ರತಿಮೆ, ಗುಹೆಗಳ ಕೆಲಸಕ್ಕೆ ಒತ್ತು ನೀಡಬೇಕು, ಗುಣಮಟ್ಟದ ವಸ್ತುಗಳ ಬಳಕೆ ಮಾಡಬೇಕೆಂದು ತಿಳಿಸಿದರು.ಸಲಹೆಗಾರರಾದ ರಂಗನಾಥ್ ಮತ್ತು ವಿನಯ್, ನೀರಾವರಿ ಇಲಾಖೆ ಮುಖ್ಯ ಅಭಿಯಂತರ ಬಣಕಾರ್,ಎಕ್ಸಿಕ್ಯೂಟಿವ್ ಅಭಿಯಂತರ ಪ್ರಶಾಂತ್, ಎಇಇ ಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!