ಗಡ್ಕರಿ ಸವಾಲಿಗೆ 32 ಕೆಜಿ ತೂಕ ಇಳಿಸಿಕೊಂಡ ಸಂಸದ: ಕ್ಷೇತ್ರ ಅಭಿವೃದ್ಧಿಗೆ ಬಂತು ಕೋಟಿ ಕೋಟಿ ಅನುದಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 1,000 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳಿಗೆ ಪ್ರತಿಯಾಗಿ ತೂಕ ಇಳಿಸಿಕೊಳ್ಳಲು ಸವಾಲು ಹಾಕಿದ ಹಿನ್ನೆಲೆ ಉಜ್ಜಯಿನಿ ಸಂಸದ ಅನಿಲ್ ಫಿರೋಜಿಯಾ ತಮ್ಮ ಕ್ಷೇತ್ರದಲ್ಲಿನ ಅಭಿವೃದ್ಧಿಗಾಗಿ ಸುಮಾರು 32 ಕೆಜಿ ತೂಕವನ್ನ ಇಳಿಸಿಕೊಂಡಿದ್ದಾರೆ.

ಹೌದು, ಫೆಬ್ರುವರಿಯಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಮತ್ತು ಫಿರೋಜಿಯಾ ಭೇಟಿಯಾದಾಗ ಸಂಸದರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಕೋರಿದರು. ಆಗ ಫಿರೋಜಿಯಾ ಅವರೆಡೆ ನೋಡಿದ ಗಡ್ಕರಿ ಹಣ ಅನುದಾನ ಪಡೆಯಲು ಅವರ ಮುಂದೆ ಷರತ್ತನ್ನಿಡುತ್ತಾರೆ. ಫಿರೋಜಿಯಾ ತಮ್ಮ ದೇಹದ ತೂಕದಲ್ಲಿ ಕಳೆದುಕೊಳ್ಳುವ ಪ್ರತಿ ಕೆಜಿಗೆ ರೂ. 1000 ಕೋಟಿ ಅನುದಾನ ನೀಡುವುದಾಗಿ ಸಚಿವರು ಆಶ್ವಾಸನೆ ನೀಡುತ್ತಾ.

ಗಡ್ಕರಿ ಸವಾಲನ್ನ ಸ್ವೀಕರಿಸಿದ ಅವರು, ‘ನಾನು ಸವಾಲನ್ನು ಸ್ವೀಕರಿಸಿದ್ದೇನೆ ಮತ್ತು ನಾನು ಸುಮಾರು 32 ಕೆಜಿ ತೂಕವನ್ನ ಕಳೆದುಕೊಂಡಿದ್ದೇನೆ’ ಎಂದು ಹೇಳಿದರು.

ಈ ವರ್ಷದ ಫೆಬ್ರವರಿಯಲ್ಲಿ ಉಜ್ಜಯಿನಿಯಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಗಡ್ಕರಿ, ಪ್ರತಿ ಕಿಲೋಗ್ರಾಂ ನಷ್ಟವಾದ ಪ್ರತಿ 1000 ಕೋಟಿ ರೂ.ಗಳನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ನೀಡುವುದಾಗಿ ಸಂಸದರಿಗೆ ಭರವಸೆ ನೀಡಿದರು.

ಅಕ್ಟೋಬರ್ 17ರಂದು ಮಾದ್ಯಮಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಫಿರೋಜಿಯಾ, ತಾನು ಸಚಿವ ಗಡ್ಕರಿ ಅವರು ಷರತ್ತನ್ನು ಸವಾಲಾಗಿ ಸ್ವೀಕರಿಸಿ ಹೆಚ್ಚುಕಡಿಮೆ 32 ಕೇಜಿಯಷ್ಟು ತೂಕ ಇಳಿಸಿರುವುದಾಗಿ ಹೇಳಿದ್ದಾರೆ. ಫಿರೋಜಿಯಾ ಅವರ ಹೊಸರೂಪ ನೋಡಿ ಸಚಿವರು ದಿಗ್ಬ್ರಾಂತರಾಗಿದ್ದು, ಉಜ್ಜಯಿನಿ ಕ್ಷೇತ್ರದ ಅಭಿವೃದ್ಧಿಗೆ ರೂ. 2300 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದರು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!