ಎತ್ತ ಸಾಗುತ್ತಿದೆ ಮುಡಾ ಕೇಸ್‌? ಹಂಚಿಕೆಯಾದ ಎರಡು ಸಾವಿರ ಸೈಟ್‌ಗಳಿಗೆ ಮೂಲ ದಾಖಲೆಯೇ ಇಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಂಚಿಕೆ ಮಾಡಿದ ಸುಮಾರು 2 ಸಾವಿರ ಸೈಟ್‌ಗಳಿಗೆ ಮೂಲ ದಾಖಲೆ ಇಲ್ಲದೇ ಇರುವ ವಿಚಾರ ಬೆಳಕಿಗೆ ಬಂದಿದೆ.

ಮುಡಾ ಹಂಚಿಕೆ ಮಾಡಿದ 5 ಸಾವಿರ ಸೈಟ್‌ಗಳಲ್ಲಿ ಸುಮಾರು 2 ಸಾವಿರ ಸೈಟ್‌ಗಳಿಗೆ ಯಾವುದೇ ಬಾಂಡ್ ಪೇಪರ್‌ಗಳೇ ಇಲ್ಲದಿರುವ ವಿಚಾರ ಜಾರಿ ನಿರ್ದೇಶನಾಲಯದ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಮೂಲಕ ಮುಡಾದಲ್ಲಿ ಬಹುದೊಡ್ಡ ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ.

50:50 ಅನುಪಾತವನ್ನೇ ವರದಾನ ಮಾಡಿಕೊಂಡ ಖದೀಮರು 1950 ಸೈಟ್‌ಗಳನ್ನು ಪಡೆದಿದ್ದಾರೆ. 1950 ಸೈಟ್‌ಗಳ ಪೈಕಿ ಒಬ್ಬೊಬ್ಬರು 30, 40, 50 ಸೈಟ್ ಪಡೆದುಕೊಂಡಿದ್ದಾರೆ.

60:40, 50:50ರ ಅನುಪಾತದಲ್ಲಿ ಒಟ್ಟು ಮುಡಾ 5 ಸಾವಿರ ಸೈಟ್‌ಗಳನ್ನು ಹಂಚಿಕೆ ಮಾಡಿದೆ. ಈ ಪ್ರಕರಣದ ತನಿಖೆಗೆ ಇಳಿದ ಇಡಿ ಮೂಲ ದಾಖಲೆಯನ್ನು ಹುಡುಕಿದೆ. ಈ ವೇಳೆ ಮುಡಾದಲ್ಲಿ ಈ ಆಸ್ತಿಗೆ ಸಂಬಂಧಿಸಿದಂತೆ ಬಾಂಡ್ ಪೇಪರ್‌ಗಳು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!