ರಾಷ್ಟ್ರಪತಿ ಅಂಗಳದಲ್ಲಿ ಮುಡಾ ಹಗರಣ: ರಾಜ್ಯ ವಿದ್ಯಮಾನಗಳ ಮಾಹಿತಿ ನೀಡಿದ ರಾಜ್ಯಪಾಲರು

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ ಮುಡಾ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್​ ನೀಡಿರುವ ಪ್ರಾಸಿಕ್ಯೂಷನ್​ ವಿರುದ್ಧ ಸಿಎಂ ಸಿದ್ದರಾಮಯ್ಯ ಕಾನೂನು ಸಮರ ನಡೆಸಿದ್ದಾರೆ. ಇದರ ಮಧ್ಯ ಇದೀಗ ಮುಡಾ ಹಗರಣ ರಾಷ್ಟ್ರಪತಿ ಅಂಗಳ ತಲುಪಿದೆ.

ಮುಡಾ ಹಗರಣದ ವಿಚಾರವಾಗಿ ಪ್ರತಿಭಟನೆಯಿಂದ ರಾಜ್ಯ ಸರ್ಕಾರ, ರಾಜಭವನದ ಮೇಲೆ‌ ನಿರಂತರ ಒತ್ತಡ ಹಾಕಲಾಗುತ್ತಿದೆ ಎಂದು ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್ ಅವರು ರಾಜ್ಯ ವಿದ್ಯಮಾನಗಳ ಬಗ್ಗೆ ರಾಷ್ಟ್ರಪತಿಗೆ ಮಾಹಿತಿ ರವಾನಸಿದ್ದಾರೆ. ಅಲ್ಲದೇ ಕೇಂದ್ರ ಗೃಹ ಸಚಿವಾಲಯಕ್ಕೂ ಮಾಹಿತಿ ನೀಡಿದ್ದಾರೆ.

ಪ್ರತಿಭಟನೆಯೊಂದಾಗಿ ಸಾರ್ವಜನಿಕ ಸಮಾರಂಭಗಳಿಗೆ ಹಾಜರಾಗದಂತಗ ದಿಗ್ಬಂಧನ ಸ್ಥಿತಿ ನಿರ್ಮಾಣವಾಗಿದೆ. ಗುಪ್ತಚರ ಇಲಾಖೆ‌ ಸಲಹೆಯಂತೆ ಬುಲೆಟ್‌ಪ್ರೂಫ್ ಕಾರು ಬಳಕೆ ಮಾಡುತ್ತಿದ್ದೇನೆ. ಕೆಲ ಸಚಿವರು ಉದ್ದೇಶಪೂರ್ವಕವಾಗಿ ಕರ್ನಾಟಕ ವಿರೋಧಿ ರಾಜ್ಯಪಾಲರು, ಗೋಬ್ಯಾಕ್ ಗವರ್ನರ್ ಚಳವಳಿ ನಡೆಸಿದ್ದಾರೆ ಎಂಬ ಅಂಶಗಳನ್ನೊಳಗೊಂಡ ವರದಿಯನ್ನು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರು ರಾಷ್ಟ್ರಪತಿ ಹಾಗೂ ಕೇಂದ್ರ ಗೃಹಸಚಿವಾಲಯಕ್ಕೆ ರವಾನಿಸಿದ್ದಾರೆ.

ಮುಡಾ ವಿಚಾರವಾಗಿ ರಾಜ್ಯದಲ್ಲಿ ಪ್ರತಿಭಟನೆ ಮೂಲಕ ರಾಜ್ಯ ಸರ್ಕಾರ, ರಾಜಭವನದ ಮೇಲೆ‌ ನಿರಂತರ ಒತ್ತಡ ಹೇರುತ್ತಿದೆ. ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆ, ಹಲವೆಡೆ ತಮ್ಮ ಪ್ರತಿಕೃತಿ ದಹನ ಮಾಡಲಾಗಿದೆ. ಸಾಲದಕ್ಕೆ ಕಾಂಗ್ರೆಸ್‌ ನಾಯಕರಿಂದ ರಾಜಭವನಕ್ಕೆ‌ ನುಗ್ಗುವ ಬೆದರಿಕೆ ಇದೆ ಎಂದು ವರದಿಯಲ್ಲಿ ರಾಜ್ಯಪಾಲರು ಉಲ್ಲೇಖಿಸಿದ್ದಾರೆ.

ಈ ವರದಿ ಬೆನ್ನಲ್ಲೆ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ಮತ್ತೊಂದು ಹಂತಕ್ಕೆ ಹೋದಂತಿದೆ.ಇನ್ನು ಈ ಸಂಬಂಧ ಸಿದ್ದರಾಮಯ್ಯಗೆ ಮತ್ತಷ್ಟು ಸಂಕಷ್ಟ ಎದುರಾಗುತ್ತಾ? ಇನ್ನು ರಾಜ್ಯಪಾಲರ ದೂರಿನ ವರದಿ ಬಗ್ಗೆ ರಾಷ್ಟ್ರಪತಿ ಮತ್ತು ಕೇಂದ್ರ ಗೃಹ ಸಚಿವಾಲಯ ಯಾವ ಕ್ರಮಕೈಗೊಳ್ಳುತ್ತೇ ಎನ್ನುವುದು ಕಾದುನೋಡಬೇಕಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!