ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ನಟಿ ಅಮಲಾ ಪೌಲ್ (Amala Paul) ಮತ್ತೊಂದು ಮದುವೆಗೆ (marriage) ಸಿದ್ಧರಾಗಿದ್ದಾರೆ.
ಗೆಳೆಯ ಜಗತ್ ದೇಸಾಯಿ ಜೊತೆ ಅಮಲಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಡಿಯೋನ ಜಗತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವರ ಮೊದಲ ಪತಿ ತಮಿಳು ನಿರ್ದೇಶಕ ಎ.ಎಲ್. ವಿಜಯ್. ಇವರ ಜೊತೆ ಅಮಲಾ ಪೌಲ್ ಅವರು 2014ರಲ್ಲಿ ಮದುವೆ ಆದರು. ಆದರೆ ಇವರ ಸಂಬಂಧ ಹೆಚ್ಚು ಸಮಯ ಉಳಿಯಲಿಲ್ಲ. ಮೂರೇ ವರ್ಷಕ್ಕೆ ಇವರು ವಿಚ್ಛೇದನ ಪಡೆದರು.
ಈಗ ಅಮಲಾ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಜಗತ್ ದೇಸಾಯಿ ಜೊತೆ ಈಗ ಅವರು ಮದುವೆ ಆಗುತ್ತಿದ್ದಾರೆ. ಬರ್ತ್ಡೇ ದಿನವೇ ಈ ಸುದ್ದಿಯನ್ನು ನಟಿ ಘೋಷಿಸಿದ್ದಾರೆ.
ಈ ಕುರಿತು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಸ್ನೇಹಿತ ಪ್ರಪೋಸ್ ಮಾಡುವ ವಿಡಿಯೋ ಇದಾಗಿದೆ. ಈ ಜೋಡಿ ಹಂಚಿಕೊಂಡಿರುವ ವಿಡಿಯೋದಲ್ಲಿ ಎಂಗೇಜ್ಮೆಂಟ್ ಸೆಲೆಬ್ರೇಷನ್ ಹೇಗಿತ್ತು ಎನ್ನುವ ಝಲಕ್ ಇದೆ. ಮಂಡಿ ಊರಿ ಅಮಲಾಗೆ ಜಗತ್ ಪ್ರಪೋಸ್ ಮಾಡಿದ್ದಾರೆ. ಇಬ್ಬರೂ ಪರಸ್ಪರ ಕಿಸ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಜಗತ್ ಅವರು ‘ನನ್ನ ಕ್ವೀನ್ ಯೆಸ್ ಎಂದಳು. ಹ್ಯಾಪಿ ಬರ್ತ್ಡೇ ಲವ್’ ಎಂದು ಬರೆದುಕೊಂಡಿದ್ದಾರೆ.
ಕೇರಳ ಮೂಲದ ಅಮಲಾ, ನೀಲತಾಮರನ್ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್ನ ಮೈನಾ ಚಿತ್ರದ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್, ವಿಕ್ರಮ್, ಸೂರ್ಯ, ಆರ್ಯ, ಜಯಂ ರವಿ, ಧನುಷ್ ಸೇರಿದಂತೆ ಕಾಲಿವುಡ್ ಸೂಪರ್ಸ್ಟಾರ್ಗಳ ಜೊತೆ ನಟಿಸಿದ್ದಾರೆ. ಅಮಲಾ ಪೌಲ್ ಅವರು ಸಿನಿಮಾ ಮಾತ್ರವಲ್ಲದೆ, ವೈಯಕ್ತಿಕ ಜೀವನದಿಂದಲೂ ಬಹಳ ಸುದ್ದಿಯಾಗಿದ್ದರು.