ಮುಂಬೈ ನಲ್ಲಿ ದಡಾರಕ್ಕೆ 11 ಬಲಿ, 220ಕ್ಕೆ ಏರಿಕೆಯಾದ ಸಕ್ರಿಯ ಪ್ರಕರಣಗಳ ಸಂಖ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್ 
ದಡಾರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಒಂದು ವರ್ಷದ ಬಾಲಕ ಮಂಗಳವಾರ ಮೃತಪಟ್ಟಿದ್ದು, ಮುಂಬೈನಲ್ಲಿ ದಡಾರ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. 12 ಹೊಸ ದಡಾರ ಸೋಂಕಿನ ವರದಿಯೊಂದಿಗೆ, ಪ್ರಕರಣಗಳ ಸಂಖ್ಯೆ 220 ಕ್ಕೆ ತಲುಪಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮುಂಬೈ ಮಂಗಳವಾರ 12 ಹೊಸ ದಡಾರ ಪ್ರಕರಣಗಳನ್ನು ವರದಿ ಮಾಡಿದೆ ಎಂದು ಬೃಹತ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಆರೋಗ್ಯ ಇಲಾಖೆ ಬುಲೆಟಿನ್ ತಿಳಿಸಿದೆ. ಇದರೊಂದಿಗೆ, ಮಂಗಳವಾರ ಅಂತಹ 170 ಸೋಂಕುಗಳು ಪತ್ತೆಯಾದ ನಂತರ ಶಂಕಿತ ಪ್ರಕರಣಗಳ ಸಂಖ್ಯೆ 3,378 ಕ್ಕೆ ಏರಿದೆ. ರಾಜ್ಯ ಆರೋಗ್ಯ ಸಚಿವ ಡಾ ತಾನಾಜಿ ಸಾವಂತ್ ಅವರು ಪರಿಸ್ಥಿತಿಯನ್ನು ಅವಲೋಕಿಸಲು ಸಭೆ ನಡೆಸಿದ್ದಾರೆ.
ಕಾಯಿಲೆಯಿಂದ ಸಾವನ್ನಪ್ಪಿದ ಒಂದು ವರ್ಷದ ಮಗು, ಪಕ್ಕದ ಪಾಲ್ಘರ್ ಜಿಲ್ಲೆಯ ನಲಸೋಪಾರ (ಪೂರ್ವ) ನಿವಾಸಿ. ಮುಂಬೈನ ಸರ್ಕಾರಿ ಆಸ್ಪತ್ರೆಯಲ್ಲಿ  ಕೊನೆಯುಸಿರೆಳೆಯಿತು. ರೋಗ ಪತ್ತೆಯಾದ ನಂತರ ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು, ಆದರೆ ನಂತರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅದರ ಚಿಕಿತ್ಸೆಯ ಸಮಯದಲ್ಲಿ ಉಸಿರಾಟದ ವೈಫಲ್ಯ ಎರ್ಪಪಟ್ಟಿತ್ತು. ಇದರಿಂದಾಗಿ ಅವರನ್ನು ಸೋಮವಾರ ವೆಂಟಿಲೇಟರ್‌ನಲ್ಲಿ ಇರಿಸಲಾಯಿತು. ಅವರ ಸ್ಥಿತಿಯು ಹದಗೆಟ್ಟು ಸೋಮವಾರ ಮೃತಪಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!