ಮುಂಬೈನಲ್ಲಿ ಅಬ್ಬರಿಸಿದ ದಡಾರ ರೋಗ: ತಿಂಗಳಲ್ಲಿ 13 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಂಬೈನಲ್ಲಿ ದಡಾರ ಸಾಂಕ್ರಾಮಿಕ ರೋಗವು ಮಕ್ಕಳಿಗೆ ಶಾಪವಾಗಿ ಮಾರ್ಪಟ್ಟಿದೆ. ಒಂದು ತಿಂಗಳೊಳಗೆ ದಡಾರದಿಂದ 13 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಡಾರ ರೋಗವು ಹೆಚ್ಚು ಹರಡಿರುವುದಾಗಿ ಮಾಹಿತಿ ನೀಡಿದರು.

ಈ ವರ್ಷ ಇದುವರೆಗೆ 233 ದಡಾರ ಪ್ರಕರಣಗಳು ವರದಿಯಾಗಿದ್ದರೆ, ಕಳೆದ ಎರಡು ತಿಂಗಳಲ್ಲಿ 200 ಪ್ರಕರಣಗಳು ವರದಿಯಾಗಿವೆ. ಕಳೆದ ಕೆಲವು ವರ್ಷಗಳಲ್ಲಿ ಇಷ್ಟು ಪ್ರಮಾಣದ ಪ್ರಕರಣಗಳು ದಾಖಲಾಗಿಲ್ಲ. ಬುಧವಾರ 30 ಮಕ್ಕಳು ದಡಾರದಿಂದ ಆಸ್ಪತ್ರೆಗೆ ದಾಖಲಾಗಿದ್ದು, 22 ಮಕ್ಕಳನ್ನು ಡಿಸ್ಚಾರ್ಜ್ ಮಾಡಲಾಗಿದೆ. ಮುಂಬೈ ಜೊತೆಗೆ ಹತ್ತಿರದ ಮಾಲೆಗಾಂವ್, ಭಿವಂಡಿ, ಥಾಣೆ, ನಾಸಿಕ್, ಅಕೋಲಾ, ಕಲ್ಯಾಣ್ ಮತ್ತು ಇತರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಮುಂಬೈ ಹಾಗೂ ಮಹಾರಾಷ್ಟ್ರದ ಇತರ ಭಾಗಗಳಲ್ಲಿ ದಡಾರ ಪ್ರಕರಣಗಳು ವ್ಯಾಪಕವಾಗಿವೆ. ಸರಿಯಾಗಿ ಲಸಿಕೆ ಹಾಕದಿರುವುದು ಕೂಡ ದಡಾರ ರೋಗಕ್ಕೆ ಕಾರಣ ಅಂತಿದಾರೆ ಅಧಿಕಾರಿಗಳು.

ಕೋವಿಡ್‌ನಿಂದಾಗಿ ಲಸಿಕೆ ಕಾರ್ಯಕ್ರಮವನ್ನು ನಡೆಸಲಾಗಿಲ್ಲ ಎಂದು ಹೇಳಲಾಗಿದ್ದು, ಇದರಿಂದ ದಡಾರ ರೋಗ ಹೆಚ್ಚುತ್ತಿದೆ. ಚಿಕ್ಕ ಮಕ್ಕಳಲ್ಲಿ ಈ ರೋಗವನ್ನು ನಿಯಂತ್ರಿಸಲು ಎರಡು ಡೋಸ್ ಲಸಿಕೆಗಳನ್ನು ನೀಡಲಾಗುತ್ತದೆ. 9-15 ತಿಂಗಳ ವಯಸ್ಸಿನ ಮಕ್ಕಳಿಗೆ ಎರಡು ಡೋಸ್ ನೀಡಬೇಕು. ಪ್ರಸ್ತುತ, ಮುಂಬೈನಲ್ಲಿ ಕೇವಲ 41 ಪ್ರತಿಶತದಷ್ಟು ಮಾತ್ರ ಮಾತ್ರ ಲಸಿಕೆ ಪಡೆದಿದ್ದು, ಕನಿಷ್ಠ 20 ಸಾವಿರಕ್ಕೂ ಹೆಚ್ಚು ಮಕ್ಕಳು ಲಸಿಕೆ ಹಾಕಿಸಿಕೊಳ್ಳುವವರಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!