ನಾನು ರಾಷ್ಟ್ರಪತಿಯಾಗಿದ್ದು ಭಾರತದ ಪ್ರತಿಯೊಬ್ಬ ಬಡವರ ಸಾಧನೆ: ದ್ರೌಪದಿ ಮುರ್ಮು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದ್ರೌಪದಿ ಮುರ್ಮು ದೇಶವನ್ನುದ್ದೇಶಿಸಿ ಮಾತನಾಡಿದರು. ಅತ್ಯುನ್ನತ ಹುದ್ದೆಗೆ ಆಯ್ಕೆ ಮಾಡಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ರಾಷ್ಟ್ರಪತಿಯಾಗಿ ನನ್ನ ಆಯ್ಕೆ ಆದಿವಾಸಿಗಳ ಗೆಲುವು, ಮಹಿಳಾ ಸಬಲೀಕರಣವೇ ನನ್ನ ಮೊದಲ ಆದ್ಯತೆ ಎಂದು ಘೋಷಿಸಿದ್ದಾರೆ. ದೇಶದ ಬಡವರ ಕನಸು ನನಸು ಮಾಡುವುದು ನನ್ನ ಗುರಿ. ದೇಶದ ಅಭಿವೃದ್ಧಿಯ ವೇಗ ಇನ್ನಷ್ಟು ಹೆಚ್ಚಬೇಕು, ಸ್ವಾತಂತ್ರ್ಯ ಅಮೃತ ಮಹೋತ್ಸವದ ಹೊತ್ತಲ್ಲಿ ಇದು ಹೊಸ ಚರಿತ್ರೆಯಾಗಬೇಕು ಎಂದರು.

ದೇಶದ ಜನರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ. ದೇಶದಲ್ಲಿ ಇನ್ನಷ್ಟು ಕ್ಷಿಪ್ರ ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ಬಡವರೂ ಕೂಡ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದು ಎಂಬುದಕ್ಕೆ ನನ್ನನ್ನು ರಾಷ್ಟ್ರಪತಿಯನ್ನಾಗಿ ಮಡಿರುವುದೇ ಸಾಕ್ಷಿ. ನಿಮ್ಮೆಲ್ಲರ ನಂಬಿಕೆ ಮತ್ತು ಬೆಂಬಲ ನನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಶಕ್ತಿ ನೀಡುತ್ತದೆ ಎಂದರು.

ರಾಷ್ಟ್ರಪತಿ ಹುದ್ದೆಗೆ ತಲುಪುವುದನ್ನು ವೈಯಕ್ತಿಕ ಸಾಧನೆ ಎಂದು ಪರಿಗಣಿಸುವುದಿಲ್ಲ, ಇದು ಭಾರತದ ಪ್ರತಿಯೊಬ್ಬ ಬಡವರ ಸಾಧನೆ. ರಾಷ್ಟ್ರಪತಿಯಾಗಿ ನಾಮನಿರ್ದೇಶನಗೊಂಡರೆ ದೇಶದ ಬಡವರು ಕನಸು ಕಾಣುವಯದಷ್ಟೇ ಅಲ್ಲದೆ, ಬಡವರು ತಮ್ಮ ಕನಸುಗಳನ್ನು ನನಸಾಗಿಸಬಹುದು ಎಂಬುದು ಸಾಬೀತಾಗಿದೆ.

ಇಷ್ಟು ವರ್ಷ ಅಭಿವೃದ್ಧಿಯಿಂದ ದೂರವಿದ್ದ ಬಡವರು, ದಲಿತರು, ಹಿಂದುಳಿದವರು, ಆದಿವಾಸಿಗಳು ಭರವಸೆಯ ಕಿರಣವಾಗಿ ಕಾಣಬಹುದಾಗಿದೆ. ಕೋಟಿಗಟ್ಟಲೆ ಮಹಿಳೆಯರ ಕನಸುಗಳು ಮತ್ತು ಸಾಮರ್ಥ್ಯಗಳ ಪ್ರತಿಬಿಂಬವಾಗಿ ನಾನು ಈ ಹುದ್ದೆಗೆ ಏರಿದ್ದೇನೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!