ಗೂಗಲ್ ಸಹ-ಸಂಸ್ಥಾಪಕನ ಪತ್ನಿಯೊಂದಿಗೆ ಅಫೇರ್ ಸುದ್ದಿ:‌ ಪ್ರತಿಕ್ರಿಯೆ ನೀಡಿದ ಮಸ್ಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಗೂಗಲ್ ಸಹ-ಸಂಸ್ಥಾಪಕರ ಪತ್ನಿಯೊಂದಿಗೆ ಆಫೇರ್‌ ಇರಿಸಿಕೊಂಡ ಬಗ್ಗೆ ಮಾಧ್ಯಮಗಳಲ್ಲಿ ಹರಿದಾಡಿದ ಸುದ್ದಿಗಳ ಬಗ್ಗೆ ಪ್ರತಿಕ್ರಿಸಿರುವ ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಈ ವಿಚಾರವನ್ನು ಸ್ಪಷ್ಟವಾಗಿ ಅಲ್ಲಗೆಳೆದಿದ್ದಾರೆ.
ಗೂಗಲ್‌ನ ಸಹ-ಸಂಸ್ಥಾಪಕರಾದ ಬಿಲಿಯನೇರ್ ಸೆರ್ಗೆ ಬ್ರಿನ್ ಅವರ ಪತ್ನಿ ನಿಕೋಲ್ ಶಾನಹಾನ್ ಅವರೊಂದಿಗೆ ಮಾಸ್ಕ್‌ ಗುಪ್ತವಾಗಿ ಸಂಬಂಧ ಇರಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
“ಮಾಧ್ಯಮಗಳ ವರದಿ ಕೇವಲ ಊಹಾಪೋಹ. ಸೆರ್ಗೆ ಮತ್ತು ನಾನು ಉತ್ತಮ ಸ್ನೇಹಿತರು. ಕಳೆದ ರಾತ್ರಿ ಸಹ ಒಟ್ಟಿಗೆ ಪಾರ್ಟಿ ಮಾಡಿದ್ದೇವೆ. ಸೆರ್ಗೆ ಪತ್ನಿ ನಿಕೋಲ್ ಅವರನ್ನು ಮೂರು ವರ್ಷಗಳಲ್ಲಿ ಎರಡು ಬಾರಿ ಮಾತ್ರ ನೋಡಿದ್ದೇನೆ. ಅದೂ ಸಹ ನಮ್ಮ  ಸುತ್ತಮುತ್ತಲು ಅನೇಕ ಜನರಿರುವ ಸಂದರ್ಭದಲ್ಲಿ. ನಮ್ಮ ನಡುವೆ ರೊಮ್ಯಾಂಟಿಕ್ ಮೂವ್‌ಮೆಂಟ್‌ ಏನೂ ಇಲ್ಲ” ಎಂದು ಮಸ್ಕ್ ಟ್ವೀಟರ್‌ ಮೂಲಕ ಸ್ಪಷ್ಟಪಡಿಸಿದ್ದಾರೆ.
ಬ್ರಿನ್ ಹಾಗೂ ಅವರ ಪತ್ನಿ ನಿಕೋಲ್ ಶಾನಹಾನ್ ಜನವರಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಮಾಧ್ಯಮಗಳಲ್ಲಿ, ಸರ್ಗೆ ಪತ್ನಿ ನಿಕೋಲ್ ಶಾನಹಾನ್ ಅವರೊಂದಿಗೆ ಮಾಸ್ಕ್‌ ಸಂಬಂಧವನ್ನು ಹೊಂದಿದ್ದರು. ಈ ವಿಚಾರ ಹೊರಬೀಳುವವರೆಗೆ ಮಸ್ಕ್ ಮತ್ತು ಬ್ರಿನ್ ನಿಕಟ ಸ್ನೇಹಿತರಾಗಿದ್ದರು ಎಂದು ವರದಿಯಾಗಿತ್ತು. ಇದಲ್ಲದೇ , ಮಸ್ಕ್ ತಮ್ಮ ಸಂಸ್ಥೆಯ ಉದ್ಯೋಗಿಯಾದ ಯುವತಿಯೊಂದಿಗೆ ಸಂಬಂಧ ಇರಿಸಿಕೊಂಡಿದ್ದು, ಆಕೆ ನವೆಂಬರ್ 2021ರಲ್ಲಿ ರಹಸ್ಯವಾಗಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಕೆಲವು ವಾರಗಳ ಹಿಂದೆ ವರದಿಗಳು ಪ್ರಕಟವಾಗಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!