Monday, December 11, 2023

Latest Posts

ಕಾನ್ಪುರದಲ್ಲಿ ಮುಸ್ಲಿಮರಿಂದ ಗಲಭೆ : 36 ಮಂದಿಯ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮಹಮದ್‌ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಲಾಗಿದೆ ಎಂದು ಕಾನ್ಪುರದ ಜನಪ್ರಿಯ ಮಾರುಕಟ್ಟೆ ಬಂದ್‌ ಗೆ ಮುಸ್ಲಿಮರು ಕರೆಕೊಟ್ಟಿದ್ದನ್ನು ಇತರರು ವಿರೋಧಿಸಿದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿದೆ.

ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಅವರು ಪ್ರವಾದಿ ಮೊಹಮದ್ದರ ವಿರುದ್ಧ ಮಾತನಾಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಮಾರುಕಟ್ಟೆ ಬಂದ್‌ ಮಾಡಲು ಉದ್ದೇಶಿಸಲಾಗಿತ್ತು ಎನ್ನಲಾಗಿದೆ.

ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚುವಂತೆ ಮುಸ್ಲೀಮರು ಒತ್ತಾಯಿಸಿದ್ದನ್ನು ಇತರರು ವಿರೋಧಿಸಿದರು ಇದರ ಪರಿಣಾಮ ಆಕ್ರೋಶಗೊಂಡ ಕೆಲವರು ಕಲ್ಲುತೂರಾಟ ನಡೆಸಿದರು ಮತ್ತು ಕಚ್ಚಾ ಬಾಂಬ್‌ ಗಳನ್ನು ಎಸೆಯಲಾಯಿತು ಎಂದು ವರದಿಯಾಗಿದೆ. ಕಲ್ಲು ತೂರಾಟದಲ್ಲಿ 13ಮಂದಿ ಪೊಲೀಸರು ಹಾಗೂ 30ಕ್ಕೂ ಹೆಚ್ಚು ಮಂದಿ ಸಾರ್ವಜನಿಕರಿಗೆ ಗಾಯಗಳಾಗಿವೆ. ಗಲಭೆಕೋರರನ್ನು ಚದುರಿಸಲು ಪೋಲೀಸರು ಲಾಠಿಚಾರ್ಜ್ ಮತ್ತು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ ಗಲಭೆಯನ್ನು ಹತ್ತಕ್ಕುವ ಪ್ರಯತ್ನ ಮಾಡಿದರು ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಈ ವರೆಗೆ ಒಟ್ಟು 36 ಜನರನ್ನು ಬಂಧಿಸಿದ್ದು 3 ಎಫ್‌ಐಆರ್‌ ದಾಖಲಿಸಲಾಗಿದೆ. ಗೂಂಡಾಕಾಯ್ದೆಯ ಅಡಿಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು ಹೆಚ್ಚಿನ ತನಿಖೆ ಜಾರಿಯಲ್ಲಿದೆ ಎಂದು ಪೋಲೀಸ್‌ ಮೂಲಗಳು ಹೇಳಿವೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!