ಪರಸ್ಪರ ತಿಳುವಳಿಕೆ- ಗೌರವದಿಂದ ಸಿಗಲಿದೆ ನಿಜವಾದ ಶಾಂತಿ: ​ಧರ್ಮಗುರು ದಲೈ ಲಾಮಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪೂರ್ವ ಯುರೋಪಿಯನ್ ದೇಶದಲ್ಲಿ ಶಾಂತಿಯನ್ನು ತ್ವರಿತವಾಗಿ ಪುನಾಃ ಸ್ಥಾಪಿಸಲು ಬೌದ್ಧ ಧರ್ಮ ಪ್ರತಿಪಾದಕ, ಟಿಬೆಟಿಯನ್​ ಧರ್ಮಗುರು ದಲೈ ಲಾಮಾ ಅವರು ಕರೆ ನೀಡಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆ ದುಃಖ ವ್ಯಕ್ತಪಡಿಸಿದ ಅವರು, ನಮ್ಮ ಪ್ರಪಂಚವು ಎಷ್ಟು ಪರಸ್ಪರ ಅವಲಂಬಿತವಾಗಿದೆ ಎಂದರೆ ಎರಡು ದೇಶಗಳ ನಡುವಿನ ಹಿಂಸಾತ್ಮಕ ಸಂಘರ್ಷದಿಂದ ಇತರೆ ಭಾಗಕ್ಕೂ ಹೊಡೆತ ಬೀಳುತ್ತದೆ .ಹಾಗಾಗಿ ಯುದ್ಧವು ಹಳೆಯದಾಗಿದೆ- ಅಹಿಂಸೆಯೊಂದೇ ಏಕೈಕ ಮಾರ್ಗವಾಗಿದೆ ಎಂದು ಹೇಳಿದ್ದಾರೆ.
ನಾವು ಇತರ ಮಾನವ ಜೀವಿಗಳನ್ನು ಸಹೋದರರು ಮತ್ತು ಸಹೋದರಿಯ ಎಂದು ಪರಿಗಣಿಸಿ ಮಾನವೀಯತೆಯ ಏಕತೆಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಆಗ ಶಾಂತಿಯುತ ಜಗತ್ತನ್ನು ನಿರ್ಮಿಸಲು ಸಾಧ್ಯ ಎಂದು ಹೇಳಿದ್ದಾರೆ.
ಯಾವುದೇ ಸಮಸ್ಯೆಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಸಂಭಾಷಣೆಯ ಮೂಲಕ ಪರಿಹರಿಸಬಹುದು. ನಿಜವಾದ ಶಾಂತಿಯು ಪರಸ್ಪರ ತಿಳುವಳಿಕೆ ಮತ್ತು ಪರಸ್ಪರರ ಯೋಗಕ್ಷೇಮದ ಗೌರವದ ಮೂಲಕ ಬರುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!