Sunday, December 4, 2022

Latest Posts

ಮೈಸೂರು: ಶೂ ಒಳಗೆ ಅಡಗಿ ಕುಳಿತಿತ್ತು ಡೆಡ್ಲಿ ನಾಗರ!

ಹೊಸದಿಗಂತ ವರದಿ, ಮೈಸೂರು:
ಮನೆ ಬಾಗಿಲಿನ ಮುಂದೆ ಬಿಡಲಾಗಿದ್ದ ಶೂ ವೊಂದರಲ್ಲಿ ನಾಗರ ಹಾವು ಅಡಗಿ ಕುಳಿತ್ತಿತ್ತು. ಬುಸುಗುಟ್ಟುವ ಶಬ್ದ ಕೇಳಿ ಹೊರ ಬಂದ ಮನೆಯವರು ಹೌಹಾರಿದ ಘಟನೆ ಮೈಸೂರಿನ ಮಹದೇವಪುರ ಬಡಾವಣೆಯ ಮನೆಯೊಂದರಲ್ಲಿ ನಡೆದಿದೆ.
ಮನೆ ಮುಂಭಾಗ ಇಟ್ಟಿದ್ದ ಚಪ್ಪಲಿ ಸ್ಟಾಂಡ್ ನಲ್ಲಿ ಶೂ ಒಳಗೆ ಅಡಗಿ ಕುಳಿತಿದ್ದ ಹಾವನ್ನು ಕಂಡು ಬೆಚ್ಚಿಬಿದ್ದ ಮನೆಯವರು ಬಳಿಕ ಉರಗ ರಕ್ಷಕ ಸ್ನೇಕ್ ಮಂಜು ಅವರಿಗೆ ಕರೆ ಮಾಡಿದ್ದಾರೆ.
ಸೃಳಕ್ಕೆ ಬಂದ ಮಂಜು ಶೂ ಒಳಗೆ ಅಡಗಿದ್ದ ಹಾವನ್ನು ಹೊರಕ್ಕೆ ತಂದು, ಅದನ್ನು ಹಿಡಿದು ಸಂರಕ್ಷಿಸಿ, ಬಳಿಕ ಅದನ್ನು ತೆಗೆದುಕೊಂಡು ಹೋದರು. ಆ ಬಳಿಕ ಮನೆಯವರೆಲ್ಲಾ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.
ಮನೆಯ ಮುಂಭಾಗ ಚಪ್ಪಲಿ ಸ್ಟಾಂಡ್ ಅಥವಾ ಶೂ ಗಳನ್ನು ಇಡುವಾಗ ಹಾಗೂ ಬಳಸುವಾಗ ಎಚ್ಚರದಿಂದ ಇರುವಂತೆ ಉರಗ ತಜ್ಞರು ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!