ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ: ವರದಕ್ಷಿಣೆ ಕಿರುಕುಳದಿಂದ ಸಾವಾಗಿದೆ ಎಂದ ಮೃತಳ ಪೋಷಕರು

ಹೊಸದಿಗಂತ ವರದಿ, ಮೈಸೂರು:

ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಮೈಸೂರಿನ ಜನತಾ ನಗರದಲ್ಲಿ ನಡೆದಿದೆ.
ನಂದಿನಿ (26) ಮೃತಳು. ಕಳೆದೆರಡು ವರ್ಷಗಳ ಹಿಂದೆ ಜನತಾನಗರದ ವಿಜಿ ಎಂಬಾತನನ್ನು ಈಕೆ ವಿವಾಹವಾಗಿದ್ದಳು. ದಂಪತಿಗೆ ಹತ್ತು ತಿಂಗಳ ಮಗು ಕೂಡ ಇದೆ.
ಮಹಿಳೆಯ ಪತಿ ಖಾಸಗಿ ಕಂಪನಿಯಲ್ಲಿ ಕಂಪ್ಯೂಟರ್ ಉದ್ಯೋಗಿಯಾಗಿದ್ದು, ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಇದರ ನಡುವೆ ನಂದಿನಿ ಗಂಡನೊAದಿಗೆ ಜಗಳವಾಡಿಕೊಂಡು, ಆತ ಬೇರೆ ರೂಮ್‌ನಲ್ಲಿ ಮಲಗಿದ್ದಾಗ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಆದರೆ, ಮೃತ ಮಹಿಳೆಯ ಕುಟುಂಬಸ್ಥರು ಇದೊಂದು ವರದಕ್ಷಿಣೆ ಕಿರುಕುಳದ ಸಾವಾಗಿದೆ ಎಂದು ಆರೋಪಿಸಿ ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!