Tuesday, September 27, 2022

Latest Posts

ಮತ್ತೆ ಪ್ರೀತಿಯಲ್ಲಿ ಬೀಳುತ್ತೇನೆ: ಬದುಕಲು ಉಸಿರಿನಷ್ಟೇ, ಪ್ರೀತಿಯೂ ಅಗತ್ಯ ಎಂದ ನಾಗಚೈತನ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಾಲಿವುಡ್‌ ನಟ ನಾಗ ಚೈತನ್ಯ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಅಮೀರ್ ಖಾನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಚೈತು ಬಾಲಿವುಡ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಈ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಾಗಚೈತನ್ಯ ಸರಣಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮತ್ತೆ ಪ್ರೀತಿಯ ಬಗ್ಗೆ ಮಾತನಾಡಿ ಕುತೂಹಲ ಕೆರಳಿಸಿದ್ದಾರೆ.

ಸಮಂತಾ ಜೊತೆ ಬ್ರೇಕ್ ಅಪ್ ಆದ ನಂತರ ಚೈತು ಒಂಟಿ ಜೀವನ ನಡೆಸುತ್ತಿದ್ದಾರೆ. ಸಂದರ್ಶನದಲ್ಲಿ ನೀವು ಮತ್ತೆ ಪ್ರೀತಿ ಮಾಡ್ತೀರಾ  ಎಂಬ ಪ್ರಶ್ನೆಗೆ ಉತ್ತರಿಸಿದ ನಾಗ ಚೈತನ್ಯ, ನಾನು ಖಂಡಿತ ಪ್ರೀತಿಯಲ್ಲಿ ಬೀಳುತ್ತೇನೆ. ಭವಿಷ್ಯದಲ್ಲಿ ಏನಾಗುತ್ತದೆ ಎಂದು ಯಾರಿಗೆ ತಿಳಿದಿದೆ. ಮನುಷ್ಯನಿಗೆ ಉಸಿರು ಎಷ್ಟು ಮುಖ್ಯವೋ, ಜೀವನಕ್ಕೂ ಪ್ರೀತಿ ಅಷ್ಟೇ ಅಗತ್ಯ. ನಾವು ಪ್ರೀತಿಸಬೇಕು, ಇತರರ ಪ್ರೀತಿಯನ್ನು ನಾವು ಪಡೆಯಬೇಕು ಆಗ ಮಾತ್ರ ಹೆಲ್ದಿ ಮತ್ತು ಪಾಸಿಟಿವ್‌ ಆಗಿ ಬದುಕಲು ಸಾಧ್ಯವಾಗುತ್ತದೆ ಎಂದರು.

ಈ ಕಾಮೆಂಟ್‌ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಾಗಚೈತನ್ಯ ಮತ್ತೆ ಯಾರನ್ನಾದರೂ ಪ್ರೀತಿ ಮಾಡ್ತಿದ್ದಾರಾ? ಅಥವಾ ಬೇರೆ ಏನಾದ್ರೂ ನಡೀತಿದ್ಯಾ ಎಂಬ ಗುಮಾನಿ ಟಾಲಿವುಡ್‌ ಅಂಗಳದಲ್ಲಿ ಓಡಾಡುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!