ಸವಾಲಿನಲ್ಲಿ ಗೆದ್ದ ನಕ್ಷತ್ರಾ… ಲಕ್ಷಣ ಧಾರವಾಹಿ ಪ್ರಿಯರಿಗೆ ಸಂತಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼಲಕ್ಷಣʼ ಧಾರವಾಹಿಯಲ್ಲಿ ಅತ್ತೆ ಶಕುಂತಲಾದೇವಿ ಮತ್ತು ಸಿ.ಎಸ್‌ ಚಂದ್ರಶೇಖರ್‌ ಹಾಕಿದ್ದ ಸವಾಲಿನಲ್ಲಿ ಗೆಲ್ಲೋರ್ಯಾರು ಎನ್ನುವ ಕುತೂಹಲಕ್ಕೆ ಕಳೆದ ಸಂಚಿಕೆಯಲ್ಲಿ ತೆರೆಬಿದ್ದಿದೆ. ಕೇವಲ 500.ರೂ ಬಳಸಿಕೊಂಡು ಮನೆಮಂದಿಗೆಲ್ಲಾ ದಿನದ ಮೂರು ಹೊತ್ತು ಯಾರು ಅಡುಗೆ ಮಾಡಿ ಬಡಿಸುತ್ತಾರೋ ಅವರೇ ಮನೆಯ ಸೊಸೆ ಎಂದು ನಿರ್ಧರಿಸುವ ಈ ಸವಾಲಿನಲ್ಲಿ ಕೊನೆಗೆ ಕಪ್ಪು ಸುಂದರಿ ನಕ್ಷತ್ರಾ ಗೆದ್ದಿದ್ದಾಳೆ.

ಅತ್ತೆ ಶಕುಂತಲಾದೇವಿ ಮತ್ತು ಸಿ.ಎಸ್‌ ಚಂದ್ರಶೇಖರ್‌ ನೀಡಿದ ಸವಾಲಿನಲ್ಲಿ ನಕ್ಷತ್ರಾ ಹಲವಾರು ಅಡ್ಡಿಗಳನ್ನು ಎದುರಿಸುತ್ತಾಳೆ. ಇನ್ನೇನು ನಕ್ಷತ್ರಾ ಸೋತೇ ಬಿಟ್ಟಳು ಎನ್ನುವ ಹೊತ್ತಿಗೆ ಶ್ವೇತಾಳ ನಿಜ ಬಣ್ಣ ಬಯಲಾಗುತ್ತದೆ. ಕೊನೆಗೆ ಶಕುಂತಲಾದೇವಿ ತನ್ನ ಮಾತಿನಂತೆ ನಕ್ಷತ್ರಾಳನ್ನು ಸೊಸೆಯಾಗಿ ಒಪ್ಪಿದ್ದು, ಈ ಮೂಲಕ ಧಾರವಾಹಿ ಪ್ರಿಯರಿಗೆ ಸಂತಸ ಮನೆಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!