ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳ ಸಾಧನೆ- ಮಂಗಳ ಗ್ರಹದ ಕಾಂತಗೋಳದ ಕುರಿತು ಮಹತ್ವದ ಸಂಶೋಧನೆಯಿದು !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳ ಸಾಮರ್ಥ್ಯ ಎಂಥಹದ್ದು ಎಂಬುದು ಇಡೀ ಗೊತ್ತಿರುವ ಅಂಶ. ಚಂದ್ರಯಾನ, ಮಂಗಳಯಾನ ಇತ್ಯಾದಿ ಬಾಹ್ಯಾಕಾಶ ಯಾನಗಳ ಮೂಲಕ ತಮ್ಮ ಸಾಮರ್ಥ್ಯವನ್ನು ಭಾರತೀಯ ವಿಜ್ಞಾನಿಗಳು ಈಗಾಗಲೇ ಸಾಬೀತುಪಡಿಸಿದ್ದಾರೆ. ಇದೀಗ ಭಾರತೀಯ ವಿಜ್ಞಾನಿಗಳ ಸಾಧನಾ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದ್ದು ಇದು ಜಗತ್ತಿನಲ್ಲಿಯೇ ಮೊದಲು ಎಂದೆನಿಸಿಕೊಳ್ಳುವ ಸಂಶೋಧನೆಯಾಗಿದೆ. ಮಂಗಳ ಗ್ರಹದ ಕಾಂತೀಯ ಗೋಳದ ಕುರಿತಾಗಿ ಭಾರತೀಯ ವಿಜ್ಞಾನಿಗಳು ಮಹತ್ವದ ಸಂಶೋಧನೆ ಮಾಡಿದ್ದು ಮಂಗಳ ಗ್ರಹದ ಸುತ್ತ ಒಂಟಿ ಅಲೆಗಳ (solitary waves) ಉಪಸ್ಥಿತಿಯ ಮೊದಲ ಪುರಾವೆಯನ್ನು ಕಂಡು ಹಿಡಿದಿದ್ದಾರೆ.

ಈ ಅಲೆಗಳು ಮಂಗಳದ ಕಾಂತಗೋಳದಲ್ಲಿ ವಿಭಿನ್ನ ವಿದ್ಯುತ್ ಕ್ಷೇತ್ರದ ಏರಿಳಿತಗಳಿಂದ ಗುರುತಿಸಲ್ಪಟ್ಟಿವೆ. ಈ ಹಿಂದೆ ಮಂಗಳ ಗ್ರಹದಲ್ಲಿ ಇವುಗಳ ಇರುವಿಕೆಯ ಕುರಿತು ಯಾವುದೇ ಸಂಶೋಧನೆಗಳು ನಡೆದಿರಲಿಲ್ಲ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜಿಯೋಮ್ಯಾಗ್ನೆಟಿಸಂ (IIG) ನ ಭಾರತೀಯ ವಿಜ್ಞಾನಿಗಳ ತಂಡವು ಇಂಥದ್ದೊಂದು ಸಾಧನೆ ಮಾಡಿದೆ.

ಭೂಮಿಯು ಒಂದು ದೈತ್ಯ ಆಯಸ್ಕಾಂತವಿದ್ದಂತೆ, ಅದರ ಸುತ್ತಲೂ ಇರುವ ಕಾಂತೀಯ ಕ್ಷೇತ್ರವು ಸೌರ ಮಾರುತದ ರೂಪದಲ್ಲಿ ಸೂರ್ಯನಿಂದ ನಿರಂತರವಾಗಿ ಹೊರಸೂಸುವ ಹೆಚ್ಚಿನ ವೇಗದ ಚಾರ್ಜ್ಡ್ ಕಣಗಳಿಂದ ನಮ್ಮನ್ನು ರಕ್ಷಿಸುತ್ತದೆ. ಆದರೆ ಮಂಗಳವು ಈ ರೀತಿಯಾದ ಆಯವುದೇ ಆಂತರಿಕ ಕಾಂತೀಯ ಕ್ಷೇತ್ರವನ್ನು ಹೊಂದಿಲ್ಲ. ಹಾಗಾಗಿ ಸೂರ್ಯಕಿರಣಗಳು ನೇರವಾಗಿ ಮಂಗಳದ ವಾತಾವರಣದೊಂದಿಗೆ ಸಂವಹನ ನಡೆಸುತ್ತವೆ ಎಂದು ಈ ಹಿಂದೆ ನಂಬಲಾಗಿತ್ತು. ಆದರೆ ಈಗ ಈ ನಂಬಿಕೆ ಬದಲಾವಣೆಯಾಗುವ ಸಾಧ್ಯತೆಯಿದೆ. ಏಕೆಂದರೆ ಮಂಗಳನ ಕಾಂತೀಯ ಕ್ಷೇತ್ರದಲ್ಲಿ ಒಂಟಿ ಅಲೆಗಳ ಪ್ರಸ್ತುತತೆಯನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಪ್ರಸ್ತುತ ಮಂಗಳನ ಅತ್ಯಂತ ತೆಳುವಾದ ಕಾಂತೀಯ ಗೋಳದಲ್ಲಿ ಈ ಒಂಟಿ ಅಲೆಗಳ ಉಪಸ್ಥಿತಿಯನ್ನು ಈ ಹಿಂದೆ ಯಾರೂ ಕಂಡು ಹಿಡಿದಿರಲಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!