ಡಾರ್ಟ್ ಮಿಷನ್ ಯಶಸ್ವಿ: ಭೂಮಿಯತ್ತ ಧಾವಿಸುತ್ತಿದ್ದ ಕ್ಷುದ್ರಗ್ರಹದ ದಿಕ್ಕು ಬದಲಾಯಿಸಿದ ನಾಸಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭೂಮಿಯ ಸಮೀಪದಲ್ಲಿ ಸಾವಿರಾರು ಬಾಹ್ಯಾಕಾಶ ಶಿಲೆಗಳಿವೆ. ಅವುಗಳಲ್ಲಿ ಯಾವುದಾದರೂ ಒಂದು ಭೂಮಿಗೆ ಅಪ್ಪಳಿಸಿದರೆ ಅದು ದೊಡ್ಡ ವಿನಾಶವೇ ಉಂಟು ಮಾಡುತ್ತದೆ. ಅವುಗಳಿಂದ ಮಾನವಕುಲವನ್ನು ಉಳಿಸಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಅದ್ಭುತ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದ್ದ ಕ್ಷುದ್ರಗ್ರಹವನ್ನು ಬೇರೆಡೆಗೆ ತಿರುಗಿಸುವ ಪ್ರಯೋಗಗಳನ್ನು ನಡೆಸಿ ಯಶಸ್ವಿ ಕಂಡಿದೆ. 530 ಅಡಿ ಅಗಲದ ಡೈಮಾರ್ಫಾಸ್ ಭೂಮಿಗೆ ಅತ್ಯಂತ ಸಮೀಪ ಬರುವುದನ್ನು ಕಂಡ ನಾಸಾದ ಡಾರ್ಟ್ ಮಿಷನ್ ಭೂಮಿಗೆ ಅಪ್ಪಳಿಸುವ ಮುನ್ನ ಅದರ ದಿಕ್ಕು ತಪ್ಪಿಸಿದೆ. ಇದು ವಿಶ್ವದಲ್ಲೇ ಮೊದಲ ಪ್ರಯೋಗ ಎಂಬುದು ಗಮನಾರ್ಹ.

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಭೂಮಿಗೆ ಅಪ್ಪಳಿಸುವ ಕ್ಷುದ್ರಗ್ರಹಗಳನ್ನು ಮರುನಿರ್ದೇಶಿಸುವ ಉದ್ದೇಶದಿಂದ ಹತ್ತು ತಿಂಗಳಿಂದ ‘DART’ ಬಾಹ್ಯಾಕಾಶದಲ್ಲಿ ಸುತ್ತುತ್ತಿದೆ. ಇಂದು ‘ಡಬಲ್ ಆಸ್ಟರಾಯ್ಡ್ ರಿಡೈರೆಕ್ಷನ್ ಟೆಸ್ಟ್ (ಡಿಎಆರ್‌ಟಿ)’ ಕ್ಷುದ್ರಗ್ರಹ ಡಿಮಾರ್ಫಾಸ್‌ನ ದಿಕ್ಕು ತಪ್ಪಿಸಿದೆ. ಕ್ಷುದ್ರಗ್ರಹಗಳ ಅಪಾಯದಿಂದ ಭೂಮಿಯನ್ನು ರಕ್ಷಿಸುವ ವಿಶ್ವದ ಮೊದಲ ಕಾರ್ಯಾಚರಣೆ ಇದಾಗಿದೆ. ಮೇರಿಲ್ಯಾಂಡ್‌ನ ಲಾರೆಲ್‌ನಲ್ಲಿರುವ ಜಾನ್ಸ್ ಹಾಪ್ಕಿನ್ಸ್ ಅಪ್ಲೈಡ್ ಫಿಸಿಕ್ಸ್ ಲ್ಯಾಬೊರೇಟರಿ (APL) ನಲ್ಲಿ ಮಿಷನ್ ಕಂಟ್ರೋಲ್ ಈ ಬಗ್ಗೆ ಸ್ಪಷ್ಟಪಡಿಸಿದೆ.

ಈ ಘಟನೆಯು ಭೂಮಿಯಿಂದ 7 ಮಿಲಿಯನ್ ಮೈಲುಗಳಷ್ಟು (11 ಮಿಲಿಯನ್ ಕಿಲೋಮೀಟರ್) ಸಂಭವಿಸಿದೆ ಎಂದು ಎಪಿಎಲ್ ಹೇಳಿದೆ. ಡೈಮಾರ್ಫಾಸ್ ಕ್ಷುದ್ರಗ್ರಹ ಡಿಡಿಮೋಸ್, 2,560-ಅಡಿ (780-ಮೀಟರ್) ಬೃಹತ್ ಕ್ಷುದ್ರಗ್ರಹದ ಸುತ್ತ ಸುತ್ತುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದರಿಂದ ಭೂಮಿಗೆ ಯಾವುದೇ ಯಾವುದೇ ಅಪಾಯವಿಲ್ಲ ಎನ್ನಲಾಗಿದೆ.

ಉದ್ದೇಶಪೂರ್ವಕವಾಗಿ ಕ್ಷುದ್ರಗ್ರಹವನ್ನು ಹೊಡೆಯುವ ಈ ತಂತ್ರವನ್ನು ‘ಕೈನೆಟಿಕ್’ ಪ್ರಭಾವ ಎಂದು ಕರೆಯಲಾಗುತ್ತದೆ. ಡಾರ್ಟ್ ಉಡಾವಣೆಯ ಯಶಸ್ಸು ಭವಿಷ್ಯದಲ್ಲಿ ಭೂಮಿಯ ಅಪ್ಪಳಿಸಿ, ವಿನಾಶ ಉಂಟುಮಾಡುವ ಕ್ಷುದ್ರಗ್ರಹಗಳನ್ನು ತಿರುಗಿಸಲು ಸಹಾಯಕವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!