ಆರ್ಡರ್ ಮಾಡಿದ್ದು ಲ್ಯಾಪ್‌ಟಾಪ್ ಆದರೆ ಬಂದಿದ್ದು ಮಾತ್ರ ಬಟ್ಟೆ ತೊಳಿಯೋ ಸೋಪು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಲ್ಯಾಪ್‌ಟಾಪ್ ಖರೀದಿ ಮಾಡಿದ ವ್ಯಕ್ತಿಗೆ ಶಾಕ್ ಆಗಿದೆ. ಗ್ರಾಹಕರೊಬ್ಬರು ಲ್ಯಾಪ್‌ಟಾಪ್ ಬದಲು ನಮಗೆ ಬಟ್ಟೆ ತೊಳೆಯುವ ಸೋಪ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಯಶಸ್ವಿ ಶರ್ಮಾ ಎನ್ನುವವರು ತಮ್ಮ ತಂದೆಗೆ ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದರು. ಆದರೆ ತಂದೆಗೆ ತಲುಪಿದ್ದು ಮಾತ್ರ ಸೋಪುಗಳು.

ಈ ರೀತಿ ಹೆಚ್ಚು ಹಣ ನೀಡಿ ಪಡೆದ ವಸ್ತುಗಳನ್ನು ಡೆಲಿವರಿ ಮಾಡಿದವರು ಆರ್ಡರ್ ಮಾಡಿದ ವ್ಯಕ್ತಿಗಳ ಎದುರೇ ಪ್ಯಾಕೇಜ್ ಓಪನ್ ಮಾಡಿ ತೋರಿಸಬೇಕು. ಲ್ಯಾಪ್‌ಟಾಪ್ ಯಾವುದೇ ರೀತಿ ಫಿಸಿಕಲ್ ಡ್ಯಾಮೇಜ್ ಆಗಿದ್ದರೆ ಅಲ್ಲಿಯೇ ಪಾರ್ಸೆಲ್ ನಿರಾಕರಿಸಬಹುದು. ಒಟಿಪಿ ನೀಡಿದ ನಂತರ ಪಾರ್ಸೆಲ್ ಪಡೆಯಬೇಕಿದೆ. ಆದರೆ ನನ್ನ ತಂದೆಗೆ ಈ ಒಟಿಪಿ ಬಗ್ಗೆ ಗೊತ್ತಿಲ್ಲ. ಸುಮ್ಮನೆ ಒಟಿಪಿ ಕೇಳಿದ ತಕ್ಷಣ ನೀಡಿದ್ದಾರೆ ಎಂದಿದ್ದಾರೆ.

ಕಸ್ಟಮರ್ ಕೇರ್‌ಗೆ ಕರೆ ಮಾಡಿದರೆ, ಒಟಿಪಿ ನೀಡಿದ ಮೇಲೆ ಮುಗಿಯಿತು, ನಿಮ್ಮ ತಂದೆಯದ್ದೇ ತಪ್ಪು ಎಂದಿದ್ದಾರೆ. ಆದರೆ ಯಶಸ್ವಿ ಬಳಿ ಸಿಸಿಟಿವಿ ಫೂಟೇಜ್‌ಗಳಿವೆ ಎನ್ನಲಾಗಿದೆ. ಈ ಬಗ್ಗೆ ನ್ಯಾಯ ಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಯಶಸ್ವಿ ಹೇಳಿಕೊಂಡಿದ್ದಾರೆ. ಹಾಗೇ ಯಾರೂ ಮೋಸ ಹೋಗಬೇಡಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!