NASA | ಚಂದ್ರನ ಮೇಲೆ ಆಮ್ಲಜನಕ ಪೈಪ್‌ಲೈನ್ ಸ್ಥಾಪಿಸಲು ಸಿದ್ಧತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭವಿಷ್ಯದ ಆರ್ಟೆಮಿಸ್ ಕಾರ್ಯಾಚರಣೆಗಳಿಗಾಗಿ ಚಂದ್ರನ ದಕ್ಷಿಣ ಧ್ರುವಕ್ಕೆ ಆಮ್ಲಜನಕವನ್ನು ಪೂರೈಸಲು ಪೈಲ್ ಲೈನ್ ಅನ್ನು ನಾಸಾ ಪರಿಗಣಿಸುತ್ತಿದೆ. ರೋವರ್‌ಗಳ ಮೂಲಕ ಆಮ್ಲಜನಕವನ್ನು ತಲುಪಿಸುವ ನಾಸಾದ ಪ್ರಸ್ತುತ ಯೋಜನೆಯು ಸಮಸ್ಯಾತ್ಮಕವಾಗಬಹುದು ಎಂದು ಚಂದ್ರ ಸಂಪನ್ಮೂಲಗಳ ಮುಖ್ಯ ವಿಜ್ಞಾನ ಅಧಿಕಾರಿ ಪೀಟರ್ ಕುರ್ರೆರಿ ಹೇಳಿದ್ದಾರೆ.

ಹಾಗಾಗಿ ಚಂದ್ರನ ಮೇಲೆ ಪೈಪ್ ಲೈನ್ ಹಾಕುವುದು ಉತ್ತಮ ಎಂದು ಲೂನಾರ್ ರಿಸೋರ್ಸಸ್ ಚೀಫ್ ಸೈನ್ಸ್ ಆಫೀಸರ್ ಪೀಟರ್ ಕುರ್ರೆರಿ ನಾಸಾಗೆ ಸಲಹೆ ನೀಡಿದ್ದಾರೆ. ನಾಸಾ ಈ ಪೈಪ್‌ಲೈನ್ ಅನ್ನು ಐಸ್ ಹೊರತೆಗೆಯುವ ಕೇಂದ್ರದಲ್ಲಿ ಹಾಕಲು ಯೋಜಿಸಿದೆ. ಈ ಪ್ರಸ್ತಾವನೆ ಕಾರ್ಯರೂಪಕ್ಕೆ ಬಂದರೆ ಭವಿಷ್ಯದಲ್ಲಿ ಗಗನಯಾತ್ರಿಗಳಿಗೆ ತುಂಬಾ ಉಪಯುಕ್ತವಾಗಲಿದೆ ಪೀಟರ್ ಕುರ್ರೆರಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!