ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಏನು ಮಾಡಿದ್ರೂ ಸುದ್ದಿ ಆಗೋದು ಸಾಮಾನ್ಯ. ರಶ್ಮಿಕಾ ಮಾಡಿದ್ದು ತಪ್ಪು ಎಂದು ಚರ್ಚೆ ಆದ ತಕ್ಷಣ ರಶ್ಮಿಕಾ ಕ್ಷಮೆ ಕೇಳಿಬಿಡ್ತಾರೆ.
ಇದೀಗ ಮತ್ತೆ ರಶ್ಮಿಕಾ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ. ಮಿಷನ್ ಮಜ್ನು ಸಿಸಿನಿಮಾದ ವಿಶೇಷ ಸ್ಕ್ರೀನಿಂಗ್ ವೇಳೆ ರಶ್ಮಿಕಾ ಫ್ಯಾನ್ಸ್ಗೆ ಕ್ಷಮೆ ಕೋರಿದ್ದಾರೆ.
ವಿಶೇಷ ಸ್ಕ್ರೀನಿಂಗ್ ವೇಳೆ ರಶ್ಮಿಕಾ ಸಿಕ್ಕಾಪಟ್ಟೆ ಅರ್ಜೆಂಟ್ನಲ್ಲಿ ಮನೆಗೆ ವಾಪಾಸಾಗಿದ್ದಾರೆ. ಕಾರ್ ಹತ್ತುವ ವೇಳೆ, ಪ್ಯಾಪರಾಝಿ ಹಾಗೂ ಫ್ಯಾನ್ಸ್ ರಶ್ಮಿಕಾರನ್ನು ಸುತ್ತುವರಿದಿದ್ದಾರೆ. ಆದರೆ ರಶ್ಮಿಕಾ ಬೇಗ ಬೇಗ ಹೋಗಿದ್ದು, ಫ್ಯಾನ್ಸ್ಗೆ ಮಾತನಾಡಿಸಿಲ್ಲ. ಪ್ಯಾಪರಾಝಿಗಳ ಫೋಟೊಗೆ ಪೋಸ್ ಕೊಟ್ಟಿಲ್ಲ. ಹೀಗಾಗಿ ಕ್ಷಮೆ ಕೋರಿದ್ದಾರೆ.