ಇಂದು ಚಂದ್ರನ ಅಂಗಳಕ್ಕೆ ಮಾನವರಹಿತ ಆರ್ಟೆಮಿಸ್-1 ಉಡಾವಣೆ: ಏನಿದರ ವಿಶಿಷ್ಟತೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) 2025 ರ ವೇಳೆಗೆ ಮನುಷ್ಯರನ್ನು ಚಂದ್ರನ ಮೇಲೆ ಇರಿಸುವ ಗುರಿಯನ್ನು ಹೊಂದಿರುವ ಹೊಸ ಮಿಷನ್ ಅನ್ನು ಪ್ರಾರಂಭಿಸಿದೆ. ಇಂದು ಸಂಜೆ 6.03ಕ್ಕೆ (ಭಾರತೀಯ ಕಾಲಮಾನ) ಅತ್ಯಂತ ಶಕ್ತಿಶಾಲಿ ಮಾನವರಹಿತ ರಾಕೆಟ್ ಚಂದ್ರನತ್ತ ರವಾನೆಯಾಗಲಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ – ನಾಸಾ ಈ ಮಾನವರಹಿತ ಉಡಾವಣೆಗೆ ಆರ್ಟೆಮಿಸ್-1 ಎಂದು ಹೆಸರಿಸಿದೆ. ಆರ್ಟೆಮಿಸ್-1 ಮಿಷನ್ ಆರು ವಾರಗಳವರೆಗೆ ಇರುತ್ತದೆ. SLS ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ. ಒರಾಯನ್ 3.86 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಚಂದ್ರನನ್ನು ತಲುಪಲು ಸುಮಾರು ಒಂದು ವಾರ ತೆಗೆದುಕೊಳ್ಳುತ್ತದೆ. ಎಸ್‌ಎಲ್‌ಎಸ್‌ ಆಕಾಶವನ್ನು ಪ್ರವೇಶಿಸಿದ ನಂತರ ನಿಗದಿತ ಸಮಯದ ನಂತರ ಒರಾಯನ್‌ ರಾಕೆಟ್‌ನೊಂದಿಗೆ ಬೇರ್ಪಟದಟು, ಚಂದ್ರನೆಡೆಗೆ ಟ್ರಾನ್ಸ್‌ಲೂನಾರ್ ಇಂಜೆಕ್ಷನ್ ಸ್ಕೀಮ್‌ಗೆ ತಲುಪಲಿದೆ.

1960 ರಲ್ಲಿ, ಚಂದ್ರನಿಗೆ ಮಾನವಸಹಿತ ಕಾರ್ಯಾಚರಣೆಗಳನ್ನು ನಡೆಸಲು ಅಮೇರಿಕಾ ಅಪೊಲೊ ಯೋಜನೆಯನ್ನು ಪ್ರಾರಂಭಿಸಿತು. ವೈಜ್ಞಾನಿಕ ಸಂಶೋಧನೆಗಾಗಿ ಅಲ್ಲ, ಸೋವಿಯತ್ ಒಕ್ಕೂಟದ ಮೇಲೆ ಮೇಲುಗೈ ಸಾಧಿಸುವ ಉದ್ದೇಶಕ್ಕಾಗಿ ಯುನೈಟೆಡ್ ಸ್ಟೇಟ್ಸ್ ಈ ಕಾರ್ಯಾಚರಣೆ ನಡೆಸಿತು. ಬಳಿಕ ಚಂದ್ರಯಾನ 1969 ರಲ್ಲಿ ಪ್ರಾರಂಭವಾಯಿತು ಮತ್ತು 1972 ರಲ್ಲಿ ಕೊನೆಗೊಂಡಿತು. 50 ವರ್ಷಗಳ ಸುದೀರ್ಘ ಅಂತರದ ನಂತರ ಮತ್ತೊಮ್ಮೆ ಚಂದ್ರನತ್ತ ಮನುಷ್ಯನನ್ನು ಕಳುಹಿಸುವ ಪ್ರಯೋಗವು ಮೊದಲ ಹೆಜ್ಜೆ ಇಡಲಿದೆ. ಆದರೆ ಹಿಂದಿನಂತೆ ಈ ಬಾರಿ ನಾಸಾ ಚಂದ್ರನ ಮೇಲೆ ಶಾಶ್ವತ ವಾಸಕ್ಕೆ ಅಡಿಪಾಯ ಹಾಕಲು ಆರ್ಟೆಮಿಸ್-1 ಮಿಷನ್ ಅನ್ನು ಪ್ರಾರಂಭಿಸಿದೆ.

ಆರ್ಟೆಮಿಸ್ ಹೆಸರು ಗ್ರೀಕ್ ಪುರಾಣದಲ್ಲಿ ದೇವತೆ ಜೀಯಸ್ನ ಮಗಳು. ಮಹಿಳಾ ಗಗನಯಾತ್ರಿಗಳಿಗೆ ಕಾರ್ಯಾಚರಣೆಯಲ್ಲಿರುವುದರಿಂದ ಅವರಿಗೆ ಗೌರವಾರ್ಥವಾಗಿ ನಾಸಾ ಆರ್ಟೆಮಿಸ್ ದೇವತೆಯ ಹೆಸರನ್ನು ಆಯ್ಕೆ ಮಾಡಿದೆ. ಈ ಯೋಜನೆಗಾಗಿ ನಾಸಾ 9,300 ಕೋಟಿ ಡಾಲರ್ ವೆಚ್ಚ ಮಾಡುತ್ತಿದೆ. ಆರ್ಟೆಮಿಸ್-1 ನ ಬೆಲೆ 400 ಮಿಲಿಯನ್ ಡಾಲರ್ ಆಗಿದ್ದರೆ, 42 ದಿನಗಳ ಪ್ರವಾಸದಲ್ಲಿ ಆರ್ಟೆಮಿಸ್-1 ಪ್ರಯಾಣಿಸಲಿರುವ ದೂರ 13 ಲಕ್ಷ ಕಿಲೋಮೀಟರ್ ಆಗಲಿದೆ ಎಂದು ನಾಸಾ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!