ಭಾರತದ ವಿರುದ್ಧ ಸೋಲಿಗೆ ಹತಾಶೆ: ಕಣ್ಣೀರಿಡುತ್ತಾ ಮೈದಾನ ತೊರೆದ ಪಾಕ್ ಆಟಗಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಭಾನುವಾರ ದುಬೈ ಕ್ರೀಡಾಂಗಣದಲ್ಲಿ ಭಾರತ- ಪಾಕ್‌ ನಡುವೆ ನಡೆದ ಏಷ್ಯಾಕಪ್‌ ಪಂದ್ಯ ರೋಚಕವಾಗಿತ್ತು. ಕೊನೆಯ ಓವರ್‌ ವರೆಗೆ ಸಾಗಿದ ಪಂದ್ಯವನ್ನು ಭಾರತ ಪಾಂಡ್ಯ- ಜಡೇಜಾ ಪರಾಕ್ರಮದ ಬಲದಿಂದ ಗೆದ್ದುಬೀಗಿತು. ಅತ್ತ ಪಾಕ್‌ ಸೋಲುತ್ತಿದ್ದಂತೆ ತಂಡದ ತಯುವ ಆಟಗಾರನೊಬ್ಬ ಸೋಲಿನ ನೋವನ್ನು ತಾಳಲಾಗದೆ ಕಣ್ಣೀರಿಡುತ್ತಾ ಮೈದಾನ ತೊರೆದಿದ್ದಾನೆ.
ಪಾಕಿಸ್ತಾನದ ವೇಗದ ಬೌಲರ್ 19 ವರ್ಷದ ನಸೀಮ್ ಶಾ ಅವರು ಏಷ್ಯಾ ಕಪ್ 2022ರಲ್ಲಿ ಭಾರತದ ವಿರುದ್ಧ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಚೊಚ್ಚಲ ಪಂದ್ಯದಲ್ಲೇ ಈ ಯುವ ವೇಗದ ಬೌಲರ್ ತಮ್ಮ ಉತ್ತಮ ಪ್ರದರ್ಶನದಿಂದ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದರು. ಇನ್ನಿಂಗ್ಸ್‌ ನ ಎರಡನೇ ಎಸೆತದಲ್ಲೇ ಕೆಎಲ್‌ ರಾಹುಲ್‌ ವಿಕೆಟ್‌ ಕಿತ್ತು ಪಾಕ್‌ ಗೆ ಮುನ್ನಡೆ ತಂದುಕೊಟ್ಟಿದ್ದ ನಸೀಮ್‌, ಪಂದ್ಯದ ಕೊನೆಯ ಘಟ್ಟದಲ್ಲಿ ಸ್ನಾಯು ಸೆಳೆಯತಕ್ಕೆ ಒಳಗಾಗಿ ನೋವಿನ ಹೊರತಾಗಿಯೂ ಆ ಓವರ್ ಅನ್ನು ಬೌಲ್ ಮಾಡಿದರು. ಆದರೆ ನಸೀಮ್‌ ಉತ್ತಮ ಪ್ರದರ್ಶನದ ಹೊರತಾಗಿಯೂ ಪಾಕ್‌ ಈ ಪಂದ್ಯವನ್ನು ಸೋತಿತು. ಪಂದ್ಯ ಮುಗಿದ ಬಳಿಕ  ನಸೀಮ್ ಶಾ ಅಳುತ್ತಾ ಮೈದಾನದಿಂದ ಹೊರಗೆ ಹೋಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿದೆ.
ಈ ವೀಡಿಯೊ ಕ್ಲಿಪ್ ಅನ್ನು ಡಿಬಿಟಿವಿಯ ಸ್ಪೋರ್ಟ್ಸ್‌ನ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ನಸೀಮ್ ಮೈದಾನದಿಂದ ವಾಪಸಾಗುತ್ತಿದ್ದಾಗ ಕೈಗಳಿಂದ ಮುಖ ಮುಚ್ಚಿಕೊಂಡು ಅಳುತ್ತಿರುವುದನ್ನು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು. ಅವರು ಕಣ್ಣೀರು ಒರೆಸಿಕೊಳ್ಳುತ್ತಾ ಡಗ್‌ ಬೌಟ್‌ ನತ್ತ ಸಾಗುತ್ತಿದ್ದಂತೆ ಸಹಾಯಕ ಸಿಬ್ಬಂದಿ ಅವರನ್ನು ಸಂತೈಸಿದ್ದಾರೆ.

ಚೊಚ್ಚಲ ಪಂದ್ಯದಲ್ಲೇ ಗಮನ ಸೆಳೆದ ನಸೀಮ್‌ ಶಾ
148 ರನ್‌ ಗಳ ಗುರಿ ಬೆನ್ನತ್ತಿದ್ದ ಭಾರತ ತಂಡಕ್ಕೆ ಮೊದಲ ಓವರ್‌ನಲ್ಲಿ ಕೆಎಲ್ ರಾಹುಲ್ ಅವರನ್ನು ಶೂನ್ಯಕ್ಕೆ ಕಳುಹಿಸುವ ಮೂಲಕ ನಸೀಮ್ ಶಾ ಗಮನ ಪಾಕ್‌ ಗೆ ಮೇಲುಗೈ ಒದಗಿಸಿದರು. ಇದಾದ ಬಳಿಕ ಸೂರ್ಯಕುಮಾರ್ ಯಾದವ್ ಅವರ ವಿಕೆಟ್‌ ಅನ್ನೂ ಕಬಳಿಸಿದರು. ತಮ್ಮ 4 ಓವರ್‌ ಗಳ ಕೋಟದಲ್ಲಿ ನಸೀಮ್ ಶಾ 27 ರನ್‌ಗಳಿಗೆ 2 ವಿಕೆಟ್‌ ಪಡೆದು ಗಮನ ಸೆಳೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!