May 12, 2026
Tuesday, May 12, 2026
spot_img

FOOD | ಘಮಘಮಿಸುವ ನಾಟಿ ಸ್ಟೈಲ್ ಎಣ್ಣೆ ಅನ್ನ: ಚಿಕನ್ ಸಾಂಬಾರ್ ಜೊತೆ ಪರ್ಫೆಕ್ಟ್ ಕಾಂಬಿನೇಷನ್!

ಎಣ್ಣೆ ಅನ್ನ ಎನ್ನುವುದು ಹಳೆಯ ಮೈಸೂರು ಭಾಗದ ಅತ್ಯಂತ ಜನಪ್ರಿಯವಾಗಿರುವ ಒಂದು ವಿಶಿಷ್ಟ ಮತ್ತು ಸಾಂಪ್ರದಾಯಿಕ ರೈಸ್ ಐಟಂ ಆಗಿದೆ. ಇದನ್ನು ಹೆಚ್ಚಾಗಿ ನಾನ್-ವೆಜ್ ಗ್ರೇವಿ, ಚಿಕನ್ ಸಾರು ಅಥವಾ ಕುರ್ಮಾ ಜೊತೆ ಸವಿಯಲು ತಯಾರಿಸಲಾಗುತ್ತದೆ.

ಬೇಕಾಗುವ ಸಾಮಗ್ರಿಗಳು
ಅಕ್ಕಿ
ಎಣ್ಣೆ
ತುಪ್ಪ
ಈರುಳ್ಳಿ
ಹಸಿಮೆಣಸಿನಕಾಯಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಪುದೀನಾ
ಕೊತ್ತಂಬರಿ ಸೊಪ್ಪು
ಸಾಸಿವೆ
ಚಕ್ಕೆ
ಲವಂಗ
ಏಲಕ್ಕಿ,
ಮರಾಠಿ ಮೊಗ್ಗು
ಪಲಾವ್ ಎಲೆ
ನೀರು

ಮಾಡುವ ವಿಧಾನ:

ಮೊದಲು ಒಂದು ದಪ್ಪ ತಳದ ಪಾತ್ರೆಗೆ ಎಣ್ಣೆ ಮತ್ತು ತುಪ್ಪ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತರ ಸಾಸಿವೆ, ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು ಮತ್ತು ಪಲಾವ್ ಎಲೆ ಹಾಕಿ ಪರಿಮಳ ಬರುವವರೆಗೆ ಹುರಿಯಬೇಕು. ಬಳಿಕ ಕತ್ತರಿಸಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ. ಈರುಳ್ಳಿ ಚೆನ್ನಾಗಿ ಮೃದುವಾಗಿ, ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿಯಿದುಕೊಳ್ಳಬೇಕು. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಅದರ ಹಸಿ ವಾಸನೆ ಹೋಗುವವರೆಗೆ 1 ನಿಮಿಷ ಕೈಯಾಡಿಸಿದ ಮೇಲೆ ಕತ್ತರಿಸಿದ ಪುದೀನಾ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಬಾಡಿಸಬೇಕು. ಈ ಮಿಶ್ರಣಕ್ಕೆ 4 ಕಪ್ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಯಲು ಬಿಡಬೇಕು. ಬಳಿಕ ನೀರು ಚೆನ್ನಾಗಿ ಕುದಿಯುವಾಗ, ಅಕ್ಕಿಯನ್ನು ಸೇರಿಸಿ ಮಿಕ್ಸ್ ಮಾಡಿ. ಮುಚ್ಚಳ ಮುಚ್ಚಿ ನೀರು ಪೂರ್ತಿ ಇಂಗುವವರೆಗೆ ಸಣ್ಣ ಉರಿಯಲ್ಲಿ ದಮ್ ಕಟ್ಟಬೇಕು ಬಳಿಕ ರುಚಿರುಚಿಯಾದ ಎಣ್ಣೆ ಅನ್ನ ಸವಿಯಲು ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !