ರಾತ್ರಿ ಹೊತ್ತಿಗೆ ಲೈಟ್, ಹೆಲ್ತಿ ಮತ್ತು ಹೊಟ್ಟೆ ತುಂಬುವ ಆಹಾರ ಬೇಕೆಂದರೆ ಸಿಹಿಕುಂಬಳಕಾಯಿ-ಆಪಲ್ ಸೂಪ್ ಬೆಸ್ಟ್. ಸಿಹಿ ಮತ್ತು ಖಾರದ ರುಚಿಯ ಮಿಶ್ರಣ ಈ ಸೂಪ್‌ಗೆ ವಿಶೇಷ ಟೇಸ್ಟ್ ಕೊಡುತ್ತದೆ. ನೀವೂ ಒಮ್ಮೆ ಟ್ರೈ ಮಾಡಿ
ಬೇಕಾಗುವ ಪದಾರ್ಥಗಳು:
ಸಿಹಿಕುಂಬಳಕಾಯಿ – 250 ಗ್ರಾಂ
ಸೇಬು – 1 ಅಥವಾ 2
ಈರುಳ್ಳಿ – 1
ಬೆಳ್ಳುಳ್ಳಿ – 3 ಎಸಳು
ಶುಂಠಿ – ಸ್ವಲ್ಪ
ತರಕಾರಿ ಸ್ಟಾಕ್ ಅಥವಾ ನೀರು – 2 ಕಪ್
ಬೆಣ್ಣೆ ಅಥವಾ ಆಲಿವ್ ಆಯಿಲ್ – 1 ಚಮಚ
ದಾಲ್ಚಿನ್ನಿ ಪುಡಿ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಮೆಣಸಿನ ಪುಡಿ – ಸ್ವಲ್ಪ
ತೆಂಗಿನ ಹಾಲು ಅಥವಾ ಕ್ರೀಮ್ – ಅರ್ಧ ಕಪ್
ಮಾಡುವ ವಿಧಾನ:
ಮೊದಲು ಪಾತ್ರೆಯಲ್ಲಿ ಬೆಣ್ಣೆ ಅಥವಾ ಎಣ್ಣೆ ಬಿಸಿ ಮಾಡಿ. ನಂತರ ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಬಳಿಕ ಸಣ್ಣದಾಗಿ ಕತ್ತರಿಸಿದ ಸಿಹಿಕುಂಬಳಕಾಯಿ ಮತ್ತು ಸೇಬು ಸೇರಿಸಿ 5 ನಿಮಿಷ ಬಾಡಿಸಿ.
ಈಗ ನೀರು ಅಥವಾ ತರಕಾರಿ ಸ್ಟಾಕ್ ಹಾಕಿ ಪಾತ್ರೆ ಮುಚ್ಚಿ ಕುಂಬಳಕಾಯಿ ಮೃದುವಾಗುವವರೆಗೆ ಬೇಯಿಸಿ. ತಣ್ಣಗಾದ ಬಳಿಕ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
ಮತ್ತೆ ಪಾತ್ರೆಗೆ ಹಾಕಿ ಉಪ್ಪು, ಮೆಣಸಿನ ಪುಡಿ, ದಾಲ್ಚಿನ್ನಿ ಪುಡಿ ಮತ್ತು ತೆಂಗಿನ ಹಾಲು ಸೇರಿಸಿ 2 ನಿಮಿಷ ಕುದಿಸಿ. ಬಿಸಿ ಬಿಸಿಯಾಗಿ ಬಡಿಸಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.



