ರಾಷ್ಟ್ರೀಯ ಸಾಕುಪ್ರಾಣಿ ದಿನ: ಈ ದಿನದ ಇತಿಹಾಸ ಮತ್ತು ಮಹತ್ವ ತಿಳಿಯಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪ್ರಾಣಿ ಪ್ರಿಯರಿಗೆ ಮನೆಯಲ್ಲಿ ಪ್ರಾಣಿಗಳನ್ನು ಸಾಕೋದಂದ್ರೆ ಬಲು ಇಷ್ಟ. ಮನೆಯಲ್ಲಿ ಸಾಕು ಪ್ರಾಣಿ ಇದ್ರೆ, ಮನೆಯ ವಾತಾವರಣ ತುಂಬಾನೆ ಲವಲವಿಕೆಯಿಂದ ಕೂಡಿರುತ್ತದೆ. ಈ ರೀತಿಯ ಸಾಕು ಪ್ರಾಣಿಗಳಿಗಾಗಿ ಒಂದು ದಿನವೇ ಇದೆ ಗೊತ್ತಾ?… ಪ್ರತಿ ವರ್ಷ ಏಪ್ರಿಲ್‌ 11ರಂದು ರಾಷ್ಟ್ರೀಯ ಸಾಕುಪ್ರಾಣಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಕುರಿತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ರಾಷ್ಟ್ರೀಯ ಸಾಕುಪ್ರಾಣಿ ದಿನದ ಇತಿಹಾಸ:

ರಾಷ್ಟ್ರೀಯ ಸಾಕುಪ್ರಾಣಿ ದಿನವನ್ನು 2006 ರಲ್ಲಿ ಪ್ರಾಣಿ ಕಲ್ಯಾಣ ವಕೀಲ ಕೊಲೀನ್ ಪೈಗೆ ಆರಂಭಿಸಿರು. ಸಾಕುಪ್ರಾಣಿಗಳನ್ನು ಚೆನ್ನಾಗಿ ನೋಡಿಕೊಳ್ಳಲು ಹಾಗೂ ಅವುಗಳನ್ನು ರಕ್ಷಿಸಲು ಜನರನ್ನು ಉತ್ತೇಜಿಸುವುದು ರಾಷ್ಟ್ರೀಯ ಸಾಕುಪ್ರಾಣಿ ದಿನದ ಉದ್ದೇಶವಾಗಿದೆ.

ರಾಷ್ಟ್ರೀಯ ಸಾಕುಪ್ರಾಣಿ ದಿನದ ಮಹತ್ವ:

ರಾಷ್ಟ್ರೀಯ ಸಾಕುಪ್ರಾಣಿಗಳ ದಿನವು ಮಹತ್ವದ್ದಾಗಿದೆ. ಏಕೆಂದರೆ ಇದು ಜನರಿಗೆ ಪ್ರಾಣಿ ಕಲ್ಯಾಣದ ಮಹತ್ವದ ಬಗ್ಗೆ ಅರಿವು ಮೂಡಿಸುತ್ತದೆ. ಸಾಕುಪ್ರಾಣಿಗಳನ್ನು ರಕ್ಷಿಸುವುದು ಮತ್ತು ಚೆನ್ನಾಗಿ ನೋಡಿಕೊಳ್ಳುವುದನ್ನು ಉತ್ತೇಜಿಸುತ್ತದೆ.

ಈ ದಿನವು ಸಾಕುಪ್ರಾಣಿಗಳು ನಮ್ಮ ಜೀವನದಲ್ಲಿ ತರುವ ಸಂತೋಷವನ್ನು ಆಚರಿಸುವುದಾಗಿದೆ. ಜನರು ತಮ್ಮ ಪ್ರೀತಿಯ ಪ್ರಾಣಿಗಳ ಬಗ್ಗೆ ಮೆಚ್ಚುಗೆ ತೋರಿಸುವಂತಹ ಸುಂದರ ದಿನವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!