ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ | ಸಂಸ್ಕಾರದ ಜೊತೆಗೆ ಸದ್ಗುಣಗಳ ಕಲಿಕೆ ಅಗತ್ಯ: ರಾಜಶೇಖರ್

ಹೊಸದಿಗಂತ ವರದಿ,ಕಲಬುರಗಿ:

ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಬದುಕುವ ರೀತಿ ಮತ್ತು ನೀತಿಯನ್ನು ಅಳವಡಿಸಿಕೊಂಡು ಸಂಸ್ಕಾರದ ಜೊತೆಗೆ ಸದ್ಗುಣಗಳನ್ನು ಕಲಿಯುವುದು ಅತ್ಯವಶ್ಯಕ ಎಂದು ಗ್ರಾಮ ವಿಕಾಸ್ ಟೋಳಿಯ ಸದಸ್ಯ ರಾಜಶೇಖರ್ ಅಭಿಮತ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಕಲಬುರಗಿ ನಗರದ ವತಿಯಿಂದ ಆಯೋಜಿಸಿದ್ದ ಬಾಲಕರ ಪಥ ಸಂಚಲನದ ಕಾಯ೯ಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿ, ವಿದ್ಯೆಯ ಜೊತೆ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿ ಬಹಳಷ್ಟು ಅವಶ್ಯಕತೆ ಇದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿಂದೂ ಹೃದಯ ಸಾಮ್ರಾಟ್ ಶಿವಾಜಿ,ಸ್ವಾಮಿ ವಿವೇಕಾನಂದರು, ಗುರು ಗೋವಿಂದ್ ಸಿಂಗ್, ರು ತಮ್ಮ ಜೀವನದಲ್ಲಿ ರೀತಿ-ನೀತಿ,ಗುರಿಯನ್ನು ಇಟ್ಟಿಕೊಂಡಿರುವ ಕಾರಣಕ್ಕೆ ಮಹಾಪುರಷರು ಎಂದೆನಿಕೊಂಡಿದ್ದಾರೆ.ಅವರ ತತ್ವವನ್ನು ಮತ್ತು ಆದಶ೯ವನ್ನು ನಾವೆಲ್ಲರೂ ಚಾಚೂ ತಪ್ಪದೆ ಪಾಲನೆ ಮಾಡಬೇಕು ಎಂದರು.

ನಮ್ಮ ಹಿಂದೂ ಧರ್ಮದ ಸಂಸ್ಕೃತಿ ಬಹಳ ಪವಿತ್ರ. ವಿಶ್ವದ ಎಲ್ಲಾ ಸಂಸ್ಕೃತಿ, ಸಂಪ್ರದಾಯ ನಶಿಸಿ ಹೋದರು,ಹಿಂದೂ ಸಂಸ್ಕೃತಿ ಮಾತ್ರ ಇನ್ನೂ ಜೀವಂತವಾಗಿ ಉಳಿದಿದೆ. ಇದಕ್ಕೆಲ್ಲ ನಮ್ಮ ಪೂವ೯ಜರು ಹಾಕಿದ ಭದ್ರ ಬುನಾದಿಯೇ ಕಾರಣವೆಂದ ಅವರು,ಪೂವ೯ಜರು ಉಳಿಸಿದ ನಮ್ಮ ಸಂಸ್ಕೃತಿ, ಆಚಾರ-ವಿಚಾರ ಮುನ್ನೆಡೆಸಿಕೊಂಡು ಹೋಗುವುದು ನಮ್ಮೆಲ್ಲರ ಕತ೯ವ್ಯವೆಂದರು.

ದೇಶ ಬದಲಾಗಬೇಕಾದರೆ, ವ್ಯಕ್ತಿ ಬದಲಾಗಬೇಕು. ವ್ಯಕ್ತಿ ಬದಲಾಗಬೇಕಾದರೆ, ಸಂಸ್ಕಾರ ನೀಡಬೇಕು. ಆ ಸಂಸ್ಕಾರವನ್ನು ಸಂಘದ ಶಾಖೆಯಲ್ಲಿ ದಿನನಿತ್ಯವು ನೀಡಲಾಗುತ್ತಿದೆ.ಸಂಘದ ಶಾಖೆಗಳಲ್ಲಿ ನಿರಂತರ ವ್ಯಕ್ತಿ ನಿಮಾ೯ಣದ ಪ್ರಕ್ರಿಯೆ ನಡೆಯುತ್ತಿದ್ದು,ಭಾರತ ದೇಶ ಅತೀ ಹೆಚ್ಚು ಯುವ ಸಮೂಹ.ಹೊಂದಿರುವ ಕಾರಣ ನಾವೆಲ್ಲರೂ ದೇಶ ಕಟ್ಟುವ ಕಾಯ೯ದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಮಲ್ಲಿಕಾರ್ಜುನ ಬುಳ್ಳಾ ವಹಿಸಿ ಮಾತನಾಡಿದರು. ಉತ್ತರ ಪ್ರಾಂತದ ಪ್ರಾಂತ ಸಂಘಚಾಲಕರಾದ ಖಗೇಶನ್ ಖಗೇಶನ್ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಶ್ರೇಯಸ್ ಠೋಕೆ ವ್ಯಯಕ್ತೀಕ ಗೀತೆ ಹಾಡಿದರು.ಪಥ ಸಂಚಲನದಲ್ಲಿ ಸುಮಾರು 220 ಬಾಲ ಸ್ವಯಂಸೇವಕರು ಪೂಣ೯ ಗಣವೇಶದಲ್ಲಿ ಭಾಗವಹಿಸಿದ್ದರು.

ನಗರ ಕಾಯ೯ವಾಹರಾದ ಮಲ್ಲಿನಾಥ್ ಅವರಾದಿ,ನಿತ್ಯಾನಂದ ಬಂಡಿ, ಚಿದಾನಂದ ಹಿರೇಮಠ, ಮುರಳಿ ಪೂಜಾರ್,ಯೋಗೇಶ್ ಭಂಡಾರಿ, ಚನ್ನವೀರ ಮಾಳಾ,ಶಿವರಾಜ್ ಸಂಗೋಳಗಿ, ಅಶ್ವಿನ್ ಕುಮಾರ್, ಭಾಗ೯ವಿ ಹಿಂದೂ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!