ರಾಷ್ಟ್ರೀಯ ಯುವಜನೋತ್ಸವ: ಅಚ್ಚರಿ ಮೂಡಿಸಿದ ಶಸ್ತ್ರಾಸ್ತ್ರ ಪ್ರದರ್ಶನ

ಹೊಸದಿಗಂತ ವರದಿ ಧಾರವಾಡ:

26ನೇ ಯುವಜನೋತ್ಸವದ ಅಂಗವಾಗಿ ಕರ್ನಾಟಕ ಕಾಲೇಜು ಗ್ರಂಥಾಲಯ ಆವರಣದಲ್ಲಿ ಭಾರತೀಯ ಸೇನೆಯ ವಿಶಿಷ್ಟ ಶಸ್ತ್ತಾಸ್ತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಮೆಷಿನ್ ಗನ್ ಗಳನ್ನು ಕಂಡು ಯುವಕ-ಯುವತಿಯರು ಅಚ್ಚರಿಗೊಂಡರು.

ಭಾರತದ ಐ ಎನ್ ಎಸ್ ಎಸ್ ರೈಫಲ್, ಎಚ್ ಎಚ್ ಟಿ ಐ, ಸರ್ವಿಲೆನ್ಸ್ ರ್ಯಾಡರ್ (radar), ರಷ್ಯಾದ ಎಕೆ 47, ಪ್ರಗ್ನ್ಯೂ ಸ್ನೈಪರ್, ಎಜಿಎಸ್ 30, ದಕ್ಷಿಣ ಆಫ್ರಿಕಾದ ಎಮ್ ಜಿ ಎಲ್, ಇಸ್ರೆಲ್ ನೆಗ್ಯು ಎಲ್ ಎಮ್ ಜಿ, ಸ್ವಿಜರ್ ಲ್ಯಾಂಡ್ ನ ಎಸ್ ಎಮ್ ಜಿ ಎಮ್ ಪಿ 9, ಅಮೇರಿಕಾದ ಸಿಗ್ ಸಾರ್ 716, ಸ್ವಿಡನ್ ನ ಆರ್ ಎಲ್‌ ಎಮ್ ಕೆ 3  ಸೇರಿದಂತೆ ಒಟ್ಟು 11 ಯಂತ್ರ ಅಸ್ತ್ರಗಳು ಪ್ರದರ್ಶನದಲ್ಲಿದ್ದವು. ಶಸ್ತ್ರಾಸ್ತ್ರಗಳೊಂದಿಗೆ ಫೋಟೊ ತೆಗೆಸಿಕೊಳ್ಳಲು ಯುವಜನತೆ ಮುಗಿಬಿದ್ದಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!