Monday, November 28, 2022

Latest Posts

ಉಕ್ರೇನ್‌ ಪ್ರದೇಶದ ಮೇಲೆ ರಷ್ಯಾ ಸ್ವಾಧೀನವನ್ನು ತಿರಸ್ಕರಿಸಿದ ನ್ಯಾಟೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನಿನ ನಾಲ್ಕು ಪ್ರದೇಶಗಳನ್ನು ರಷ್ಯಾ ಸ್ವಾಧೀನ ಪಡಿಸಿಕೊಂಡಿರುವುದಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕ್ರೆಮ್ಲಿನ್ ಸಮಾರಂಭದಲ್ಲಿ ಔಪಚಾರಿಕವಾಗಿ ಘೋಷಿಸಿದ ಒಂದು ದಿನದ ನಂತರ, ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೋ) ಶುಕ್ರವಾರ ಉಕ್ರೇನ್‌ನ ನಾಲ್ಕು ಪ್ರದೇಶಗಳ ರಷ್ಯಾದ ಸ್ವಾಧೀನವನ್ನು ತಿರಸ್ಕರಿಸಿದ್ದು ರಷ್ಯಾದ ಈ ಸ್ವಾಧೀನವು ಅಕ್ರಮ ಮತ್ತು ಕಾನೂನುಬಾಹಿರ ಎಂದಿದೆ.

“ನ್ಯಾಟೋ ಮಿತ್ರರಾಷ್ಟ್ರಗಳು ಈ ಯಾವುದೇ ಭೂಪ್ರದೇಶಗಳನ್ನು ರಷ್ಯಾದ ಭಾಗವೆಂದು ಗುರುತಿಸುವುದಿಲ್ಲ ಏಕೆಂದರೆ ಈ ಭೂಕಬಳಿಕೆ ಕಾನೂನುಬಾಹಿರ ಮತ್ತು ಅಕ್ರಮವಾಗಿದೆ” ಎಂದು ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ, ಉಕ್ರೇನ್‌ ನ್ಯಾಟೋ ಮಿಲಿಟರಿಗೆ ಮೈತ್ರಿಗೆ ಸೇರಲು “ವೇಗವರ್ಧಿತ” ಅರ್ಜಿಯನ್ನು ಕೋರಿದ ಗಂಟೆಗಳ ನಂತರ ಅವರು ಈ ಹೇಳಿಕೆಯನ್ನು ಹೊರಹಾಕಿದ್ದಾರೆ.

ಪ್ರಮುಖ ನ್ಯಾಟೋ ಮಿತ್ರರಾಷ್ಟ್ರವಾಗಿರುವ ಯುಎಸ್, ನ್ಯಾಟೋ ಪ್ರದೇಶದ ಪ್ರತಿ ಇಂಚಿನನ್ನೂ ರಕ್ಷಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಿದೆ.ರಷ್ಯಾದ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ಘೋಷಿಸಿದ ಯುಎಸ್ ಅಧ್ಯಕ್ಷ ಜೋ ಬಿಡೆನ್, “ನ್ಯಾಟೋ ಪ್ರದೇಶದ ಪ್ರತಿಯೊಂದು ಇಂಚಿನ್ನೂ ರಕ್ಷಿಸಲು ನಮ್ಮ ನ್ಯಾಟೋ ಮಿತ್ರರಾಷ್ಟ್ರಗಳೊಂದಿಗೆ ಅಮೇರಿಕಾ ಸಂಪೂರ್ಣವಾಗಿ ಸಿದ್ಧವಾಗಿದೆ, ಆದ್ದರಿಂದ ಮಿಸ್ಟರ್ ಪುಟಿನ್, ನಾವು ಇಂದು ಕೂಡ ಹೊಸ ನಿರ್ಬಂಧಗಳನ್ನು ಘೋಷಿಸುತ್ತಿದ್ದೇವೆ.” ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!