September 27, 2026
Sunday, September 27, 2026
spot_img

ಅಲೆಗಳ ಅಬ್ಬರಕ್ಕೆ ‘ನವರತ್ನ ಬೋಟ್’ ಸಮುದ್ರಪಾಲು: ಮುಳುಗಿದ ಬೋಟಿನಿಂದ 7 ಮಂದಿಯ ರಕ್ಷಣೆ

ಹೊಸದಿಗಂತ ವರದಿ ಕಾರವಾರ:

ಮೀನುಗಾರಿಕೆಗೆ ತೆರಳಿದ್ದ ಪರ್ಶೀನ್ ಬೋಟು ಮುಳುಗಡೆಯಾಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ಬೋಟಿನಲ್ಲಿದ್ದ ಏಳು ಜನ ಮೀನುಗಾರರನ್ನು ಇತರ ಬೋಟುಗಳ ಮೀನುಗಾರರು ರಕ್ಷಣೆ ಮಾಡಿದ್ದಾರೆ.

ಅಂಕೋಲಾ ತಾಲೂಕಿನ ಬೆಳಂಬಾರದಿಂದ ಬೆಳಿಗ್ಗೆ 6 ಗಂಟೆಗೆ ಮೀನುಗಾರಿಕೆಗೆ ತೆರಳಿದ್ದ ನವರತ್ನ ಹೆಸರಿನ ಮೀನುಗಾರಿಕೆ ಬೋಟು ಮದ್ಯಾಹ್ನ 12 ಗಂಟೆ ಸುಮಾರಿಗೆ ಹೊನ್ನಾವರ ತಾಲೂಕಿನ ತಾರಿಬಾಗಿಲ ಬಳಿ ಸಮುದ್ರದಲ್ಲಿ ಹಾನಿಗೊಳಗಾಗಿ ಒಳಗೆ ನೀರು ನುಗ್ಗಿ ಮುಳುಗಡೆಯಾಗಿದ್ದು ಬೋಟಿನ ಇಂಜಿನ್, ಬಿಡಿಭಾಗ, ಮೀನುಗಾರಿಕೆ ಬಲೆ ಇನ್ನಿತರ ವಸ್ತುಗಳು ಸೇರಿದಂತೆ ಸುಮಾರು 80 ಲಕ್ಷ ರೂಪಾಯಿಗಳಷ್ಟು ಹಾನಿ ಸಂಭವಿಸಿದೆ.

ಇದನ್ನೂ ಓದಿ:

ಬೋಟು ಮುಳುಗಡೆ ಆಗುತ್ತಿರುವ ಸುದ್ಧಿ ತಿಳಿಯುತ್ತಿದ್ದಂತೆ ಕಾಸರಕೋಡಿನ ದರಿಯಾ ದೌಲತ್ ಬೋಟ್ ಮಾಲಿಕ ಅಬ್ದುಲ್ ಗಪೂರ್ ಮತ್ತಿತರರು ತಮ್ಮ ಬೋಟಿನಲ್ಲಿ ಬಂದು ಮುಳುಗುತ್ತಿರುವ ಬೋಟಿನಲ್ಲಿದ್ದ ಅಂಕೋಲಾ ತಾಲೂಕಿನ ಬೆಳಂಬಾರದ ವೆಂಕಟೇಶ ಖಾರ್ವಿ, ನಾಗಪ್ಪ ಖಾರ್ವಿ,ಸಂದೀಪ ಖಾರ್ವಿ, ವಿಕಾಸ ಖಾರ್ವಿ,ವಿಘ್ನೇಶ ಖಾರ್ವಿ,ಲತೇಶ್ ಖಾರ್ವಿ ಮತ್ತು ರಜತ ಬಾನಾವಳಿಕರ ಎನ್ನುವವರನ್ನು ರಕ್ಷಿಸಿ ಸುರಕ್ಷಿತವಾಗಿ ಕಡಲ ತೀರಕ್ಕೆ ಕರೆ ತಂದಿದ್ದಾರೆ.

ಈ ಬಾರಿಯ ಮೀನುಗಾರಿಕೆ ಋತುವಿನ ಕೊನೆಯ ದಿನ ಯಾಂತ್ರಿಕೃತ ಮೀನುಗಾರಿಕೆ ನಿಷೀದಿತ ಅವಧಿಯ ಒಂದು ದಿನದ ಪೂರ್ವದಲ್ಲಿ ದುರ್ಘಟನೆ ಸಂಭವಿಸಿದೆ

Must Read