Friday, July 1, 2022

Latest Posts

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಲೇಡಿ ಸೂಪರ್‌ ಸ್ಟಾರ್..!

‌ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲಿ ಹೆಚ್ಚಿನ ಖ್ಯಾತಿ ಗಳಿಸಿಕೊಂಡ ಸ್ಟಾರ್‌ ಹೀರೋಯಿನ್‌ ನಯನತಾರಾ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿವೆ. ನಯನತಾರಾ ತಮಿಳು ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿ ಮಾಡ್ತಿದ್ದು, ಇವರಿಬ್ಬರ ಮದುವೆ ವಿಚಾರ ಕಳೆದ ಕೆಲ ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿದ್ದರೂ ತಲೆಕೆಡಿಸಿಕೊಂಡಿರಲಿಲ್ಲ.

ಇವರಿಬ್ಬರಿಗೂ ಎಂಗೇಜ್ಮೆಂಟ್‌ ಆಗಿದ್ದು, ಮದುವೆ ಬಗ್ಗೆ ಎಲ್ಲಿಯೂ ಚಕಾರ ಎತ್ತಿರಲಿಲ್ಲ. ಸದ್ಯ ಈ ಜೋಡಿ ತಮ್ಮ ಪ್ರೇಮ ಪ್ರಕರಣವನ್ನು ಕೊನೆಗಾಣಿಸಿ ಸಪ್ತಪದಿ ತುಳಿಯಲು ನಿರ್ಧರಿಸಿದ್ದಾರೆ. ನಾಲ್ಕು ವರ್ಷಗಳ ತಮ್ಮ ಪ್ರೀತಿಯನ್ನು ಇದೇ ಜೂನ್ 9 ರಂದು ಮದುವೆ ಎಂಬ ಸಂಬಂಧಕ್ಕೆ ಗಂಟು ಹಾಕಲಿದ್ದಾರೆ. ಅಂದು ತಿರುಪತಿಯಲ್ಲಿ ಮದುವೆ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಮುಹೂರ್ತ ಕೂಡ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಮದುವೆ ಸ್ಥಳದ ಆಯ್ಕೆ ಹಾಗೂ ಇತರೆ ವ್ಯವಸ್ಥೆಗಾಗಿ ದಂಪತಿ ಶನಿವಾರ ತಿರುಮಲಕ್ಕೆ ಆಗಮಿಸಿದರು. ಇವರ ತಿರುಪತಿ ಭೇಟಿ ಮದುವೆಗೆ ಸ್ಥಳವನ್ನು ಕಾಯ್ದಿರಿಸಲು ಬಂದಿದ್ದರು ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss